

ಕಟಕೋಳ: ವೀರಶೆವ ಧರ್ಮ ಅತ್ಯಂತ ಪ್ರಾಚಿನ ಹಾಗೂ ಉನ್ನತ ಸಂಸತಿ ಹೊಂದಿದ್ದು, ಅದರ ಉಳಿವು ಮತ್ತು ಬೆಳವಣಿಗೆಗಾಗಿ ಗೊಡಚಿ ವೀರಭದ್ರೇಶ್ವರ ೇತ್ರದಲ್ಲಿ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸ್ಥಾಪನೆ ಮಾಡಲಾಗುತ್ತಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.
ಸಮೀಪದ ಗೊಡಚಿ ವೀರಭದ್ರೇಶ್ವರ ೇತ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಗದ್ಗುರು ರೇಣುಕಾಚಾರ್ಯ ಗುರುಕುಲ ಮತ್ತು ಸಭಾಭವನದ ಶಿಲಾನ್ಯಾಸ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಕಲ ಜೀವಾತ್ಮರಿಗೆ ವೀರಶೆವ ಧರ್ಮ ಒಳಿತನ್ನೇ ಬಯಸುತ್ತದೆ. ಜಗದ್ಗುರು ರೇಣುಕಾಚಾರ್ಯ ಬೋಧಿಸಿದ ಶಿವಾದ್ವೆ$ೃತ ತತ್ತ್ವವು ಜೀವಾತ್ಮ ಪರಮಾತ್ಮನೆಡೆಗೆ ಸಾಗಲು ಸಹಕಾರಿ. ಯುವಪೀಳಿಗೆಗೆ ಸಂಸತಿ, ಸಂಸ್ಕಾರ ತಿಳಿಸಲು ಗುರುಕುಲ ಮಾದರಿ ಶಿಣ ಮುಖ್ಯ ಎಂದರು.
ಪಾಟೀಲ ಬಂಧುಗಳು ರಂಭಾಪುರಿ ಪೀಠಕ್ಕೆ ದಾನ ಮಾಡಿದ ಒಂದು ಎಕರೆ ಜಮೀನಿನಲ್ಲಿ ಜಗದ್ಗುರು ರೇಣುಕಾಚಾರ್ಯ ಮಂದಿರ, ಗುರುಕುಲ, ಹಾಗೂ ಸಭಾಭವನ ಕಟ್ಟಡಗಳನ್ನು ಭಕ್ತರ ಸಹಕಾರದಿಂದ ಪೂರ್ಣಗೊಳಿಸಲಾಗುವುದು ಎಂದರು.
ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಭಾರತೀಯ ಸಂಸತಿ ಮರೆತು ಜನರು ಮಾನಸಿಕ ಶಾಂತಿ ಕಳೆದುಕೊಳ್ಳುತ್ತಿದ್ದಾರೆ. ಗುರುಕುಲ ಮತ್ತು ಸಮುದಾಯ ಭವನ ನಿರ್ಮಾಣ ಉತ್ತಮ ಕಾರ್ಯ. ಸಂಸದರ ನಿಧಿಯಿಂದ ಈ ಕಾರ್ಯಕ್ಕೆ ವಿಶೇಷ ಅನುದಾನ ಕೊಡುವುದಾಗಿ ಭರವಸೆ ನೀಡಿದರು.
ಎಂ.ಚಂದರಗಿ ಮತ್ತು ಕಟಕೋಳ ಹಿರೇಮಠದ ವೀರಭದ್ರ ಶಿವಾಚಾರ್ಯರು ಮಾತನಾಡಿ, ಬಹು ದಿನಗಳ ಕನಸು ನನಸಾಗುವ ಸುದಿನ ಕೂಡಿಬಂದಿದೆ. ಗುರುಕುಲ, ಮಂದಿರ, ಸಭಾಭವನ ನಿರ್ಮಾಣವು ಭಕ್ತರ ಸಹಕಾರದಿಂದ ಬೇಗ ಮುಗಿಸಲಾಗುವುದು ಎಂದರು.
ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ 5 ಲ ರೂ. ನೀಡುವ ಭರವಸೆ ನೀಡಿದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ತಮ್ಮ ಮಠದಿಂದ ಕಟ್ಟಡಕ್ಕೆ 5 ಲ ಕೊಡುವುದಾಗಿ ತಿಳಿಸಿದರು. ಧನಲಕ್ಷಿ$್ಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯ ಮಲ್ಲಣ್ಣ ಯಾದವಾಡ ಪ್ರಾಸ್ತಾವಿಕ ಮಾತನಾಡಿದರು. ಕಿಲ್ಲಾ ತೊರಗಲ್ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಮುಳ್ಳೂರ ಅನ್ನದಾನೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬನ್ನೂರು, ವಿಮಲಖೇಡ, ಭಾಗೋಜಿಕೊಪ್ಪ, ಚಿಪ್ಪಲಕಟ್ಟಿ, ಸಂಗೊಳ್ಳಿ, ಕುಂದರಗಿ, ಸತ್ತಿಗೇರಿ, ಹೊಸಯರಗಟ್ಟಿ, ಕಬ್ಬೂರು, ಲೋಕಾಪುರ ಶ್ರೀಗಳು, ಮಹಾಂತೇಶ ಶಾಸ್ತ್ರಿ, ಟಿ.ಪಿ.ಮನೋಳಿ, ಎಸ್.ಬಿ. ಹಿರೇಮಠ, ಎಂ.ಕೊಟ್ರೇಶಪ್ಪ, ರಾಜೇಶ ಬೀಳಗಿ, ಡಾ.ಗುರುಪಾದಯ್ಯ ಸಾಲಿಮಠ ಇತರರು ಇದ್ದರು.