

ಸಾಗರ: ಮಾದಕ ವಸ್ತು ತ್ಯಜಿಸಿ ಸುಖ ಜೀವನ ನಡೆಸಿ ಎನ್ನುವ ಘೋಷವಾಕ್ಯವನ್ನು ಯುವ ಸಮೂಹ ಪಾಲಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾೀೀಶ ಎಂ.ಎಸ್.ಸಂತೋಷ್‌ಕುಮಾರ್ ಹೇಳಿದರು.
ಸಾಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ನಶೆಮುಕ್ತ ಭಾರತ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಮಾದಕ ವಸ್ತು ಬೆಂಕಿಯ ಜ್ವಾಲೆ ಇದ್ದಂತೆ. ಒಮ್ಮೆ ಮಾದಕ ವಸ್ತುಗಳ ದಾಸರಾದರೆ ಅದರಿಂದ ಹೊರಬರುವುದು ಕಷ್ಟ. ಯುವ ಸಮೂಹ ದುಶ್ಚಟಗಳಿಂದ ದೂರವಿದ್ದು, ಸುಂದರ ಬದುಕು ಕಟ್ಟಿಕೊಳ್ಳುವತ್ತ ಗಮನ ಹರಿಸಬೇಕು. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಪೊಲೀಸ್ ಉಪಾೀಕ್ಷಕ ಡಾ. ಎನ್.ಜೆ.ಬೆನಕಪ್ರಸಾದ್ ಮಾತನಾಡಿ, ಬದುಕಿನಲ್ಲಿ ಅನೇಕ ಕನಸುಗಳನ್ನು ಯುವ ಸಮೂಹ ಕಂಡಿರುತ್ತದೆ. ಆದರೆ ಕೆಲವು ಸಂದರ್ಭಗಳು ನಿಮ್ಮ ದಿಕ್ಕು ತಪ್ಪಿಸಿ, ಕನಸುಗಳನ್ನು ನುಚ್ಚುನೂರು ಮಾಡುತ್ತದೆ. ಅದರಲ್ಲಿ ಮಾದಕ ವಸ್ತು ಸೇವನೆಯೂ ಒಂದು. ಮಾದಕವಸ್ತು ಸೇವನೆ ಮಾಡಿದ ವ್ಯಕ್ತಿ ಏನು ಮಾಡುತ್ತೇನೆ ಎನ್ನುವುದನ್ನು ಮರೆತು ವರ್ತಿಸುತ್ತಾನೆ. ನಿಮ್ಮ ಮೇಲೆ ನಿರೀಕ್ಷೆ ಇರಿಸಿಕೊಂಡ ತಂದೆ, ತಾಯಿ ಕನಸನ್ನು ನನಸು ಮಾಡುವತ್ತ ಗಮನಹರಿಸಿ. ನಶೆಯಿಂದ ದೂರವಿದ್ದು ಉತ್ತಮ ಪ್ರಜೆಗಳಾಗಿ ಬದುಕಿ ಎಂದರು.
ಪ್ರಾಚಾರ್ಯ ಡಾ. ಜಿ.ಸಣ್ಣಹನುಮಪ್ಪ, ಡಾ. ಮಮತಾ ಹೆಗಡೆ, ಪ್ರೊ. ಮೇಘಾ ಭೂತೆ, ಶರಾವತಿ, ಅಶ್ರಿತಾ, ಅನುಷಾ, ಸುವರ್ಣಾ ವಿ. ನಾಯಕ್, ಮೇಘಾ ಇತರರಿದ್ದರು.