

ಇಂಡಿ:ತಂಬಾಕು ಸೇವನೆಯಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳು ತಗಲುತ್ತವೆ. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದರಿಂದ ಮಕ್ಕಳನ್ನು ರಕ್ಷಿಸುವುದು ಅವಶ್ಯಕತೆ ಇದೆ ಎಂದು ಹಿರಿಯ ದಂತ ವೈದ್ಯಾಧಿಕಾರಿ ಡಾ.ರವಿ ಭತಗುಣಕಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ನಿಷೇಧ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಜನತೆ ಗುಟಕಾ, ಸಿಗರೇಟ್ ಸೇರಿ ಇತರ ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸುವುದು ಅವಶ್ಯ. ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ನಾಗರಿಕರ ಸಹಕಾರವೂ ಮುಖ್ಯ ಎಂದರು.
ಡಾ.ಎಸ್.ಐ.ಮೇತ್ರಿ ಮಾತನಾಡಿದರು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಐ.ಎಸ್. ಧಾರವಾಡಕರ, ವೈದಾಧಿಕಾರಿಗಳಾದ ಡಾ.ಜಗದೀಶ ಬಿರಾದಾರ, ಡಾ.ಅಮಿತ್ ಕೊಳೇಕರ, ಡಾ.ವಿಪುಲ್ ಕೊಳೇಕರ, ಡಾ.ವಿಕಾಸ್ ಸಿಂದಗಿ, ಡಾ.ಪ್ರವೀಣ್ ಗಜಾಕೋಶ ಹಾಗೂ ಆಸ್ಪತ್ರೆಯ ಸಿಬ್ಬಂದಿ ಶಿವಾಜಿ ಮಾನೆ, ಕೆ,ಜಿ, ಶೀಲವಂತ, ಬಸವರಾಜ ಅಹಿರಸಂಗ, ಶಶಿಕಾಂತ ನಾವಿ, ಸವಿತಾ ಕನ್ನಳ, ಸೋಮನಿಂಗ ಸಜ್ಜನ, ಚಂದ್ರಾಮ ಮೇಡೆದಾರ, ಸಂಜೀವ ಬಡಿಗೇರ, ಮರಿಯಪ್ಪ ದೊಡ್ಡಮನಿ ಹಾಗೂ ಬಿಇಒ ಕಚೇರಿ ಸಿಬ್ಬಂದಿ, ಶಿಕ್ಷಕರು ಇತರರಿದ್ದರು.