

ತುಮಕೂರು: ಮಾದಕ ವ್ಯಸನದಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶ್ರೀ ಸಿದ್ಧಾರ್ಥ ವೈದ್ಯಕಿಯ ಮಹಾವಿದ್ಯಾಲಯದ ನರ್ಸಿಂಗ್ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಬುಧವಾರ ಜಾಥಾ ಹಮ್ಮಿಕೊಂಡಿದ್ದರು. ಈ ವೇಳೆ ಯುವಜನತೆಯನ್ನು ಎಚ್ಚೆತ್ತಿಸುವ
ನಿಟ್ಟಿನಲ್ಲಿ ವಿವಿಧ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.
ನಗರದ ಟೌನ್ ಹಾಲ್ ವೃತ್ತದಿಂದ ನರ್ಸಿಂಗ್ ವಿದ್ಯಾರ್ಥಿಗಳು, ಯುವಕರೇ ಎಚ್ಚೆತ್ತುಕೊಳ್ಳಿ ಮದ್ಯಪಾನ, ಧೂಮಪಾನದ ದಾಸರಾಗಬೇಡಿ ಮಾದಕ ವ್ಯಸನಕ್ಕೆ ಒಳಗಾಗಬೇಡಿ ಎಂದು ಘೋಷಣೆ, ವಿವಿಧ ಭಿತ್ತಿಪತ್ರಗಳನ್ನು ಹಿಡಿದು ನಗರದ ಚರ್ಚ್ ಸರ್ಕಲ್ ಮೂಲಕ ದೇವರಾಜು ಅರಸು ಸರ್ಕಾರಿ ಬಸ್ ರ್ಟಮಿನಲ್ವರೆಗೆ ಜಾಗೃತಿ ಜಾಥಾ ನಡೆಸಿದರು. ನಂತರ ಬಸ್ ನಿಲ್ದಾಣ ಮುಂಭಾಗ ಜನರನ್ನು ಸೆಳೆಯಲು ನೃತ್ಯ ಹಾಗೂ ನಾಟಕ ಪ್ರದರ್ಶಿಸಿ ಮಾದಕ ವ್ಯಸನದಿಂದ ಉಂಟಾಗುವ
ದುಷ್ಪರಿಣಾಮದ ಬಗ್ಗೆ ಯುವ ನಾಂಗ ಎತ್ತ ಸಾಗುತ್ತಿದೆ, ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದರ ಕುರಿತು ಅರಿವು ಮೂಡಿಸಿದರು.
ನರ್ಸಿಂಗ್ ವಿಭಾಗದ ಮುಖ್ಯ ಉಪನ್ಯಾಸಕಿ ಮೂರ್ಸಿ ದೇವಪ್ರಿಯಾ ಮಾತನಾಡಿ, ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣಿ ಕಾನೂನುಬಾಹಿರ ಚಟುವಟಿಕೆ ಎಂಬ ಅರಿವಿದ್ದರು ಯುವಕರು ಈ ಚಟುವಟಿಕೆಗಳಲ್ಲಿ ಭಾಗಿಗಳಾಗುತ್ತಿರುವುದು ಆತಂಕಕಾರಿ ಎನಿಸಿದೆ. ಸರ್ಕಾರಗಳು ಎಷ್ಟೇ ಸೂಕ್ತ ಕ್ರಮಗಳನ್ನು ಕೈಗೊಂಡರು ಯುವ ಸಮೂಹ ಮಾದಕ ಸೇವನೆಯ ದಾಸರಾಗುತ್ತಿದ್ದಾರೆ ಇದರಿಂದ ಯುವ ಸಮೂಹವನ್ನ ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು. ನರ್ಸಿಂಗ್ ವಿಭಾಗದ ಉಪನ್ಯಾಸಕಿ ಶಿಲ್ಪಾ, ಚೇತನ್, ಅನುಪಮ,
ಗಗನಾ, ಶ್ವೇತಾ ಸೇರಿದಂತೆ ಇತರರು ಜಾಥಾದ ನೇತೃತ್ವವಹಿಸಿದ್ದರು.