ಯುವಕರು ಸಮಾಜಮುಖಿಯಾಗಿ ಬೆಳೆಯಲಿ

WhatsApp Image 2024-08-05 at 2.48.06 PM (1)
Published on

‌ಬಳ್ಳಾರಿ : ಯುವಕರು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿ, ಸಮಾಜಮುಖಿಯಾಗಿ ಬೆಳೆದು, ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಶ್ರೀಧರಗಡ್ಡೆ ಶಾಖಾ ಮಠದ ಮರಿಕೊಟ್ಟೂರು ಸ್ವಾಮೀಜಿ ಹೇಳಿದರು.
ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಆಯೋಜಿಸಿದ್ದ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸೇವಾ ಮನೋಭಾವದ ಮೂಲ ಸಮುದಾಯದೊಂದಿಗೆ ಬೆರೆತು ಸಾಮಾಜಿಕ ಪ್ರಜ್ಞೆಯಿಂದ ಕಾರ್ಯನಿರ್ವಹಿಸಬೇಕು. ಗ್ರಾಮಗಳ ಅಭಿವೃದ್ಧಿಯ ಕಲ್ಪನೆ ದೇಶದ ಅಭಿವೃದ್ಧಿಯಲ್ಲಿ ಅಡಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಮೂಢನಂಬಿಕೆ, ಸ್ವಚ್ಛತೆ, ಶಿಕ್ಷಣ, ಆರೋಗ್ಯ, ಮತದಾನ ಮುಂತಾದ ವಿಷಯಗಳ ಬಗ್ಗೆ ಹೊಸ ಅರಿವು ಮೂಡಿಸುವ ಕೆಲಸ ಮಾಡಬೇಕು. ಸ್ವಾರ್ಥ ಬಿಟ್ಟು ನಿಸ್ವಾರ್ಥಯಿಂದ ಸೇವೆ ಮಾಡಿದಾಗ ಸಮಾಜ ನಿಜವಾದ ಅರ್ಥದಲ್ಲಿ ಅಭಿವೃದ್ಧಿಯಾಗುತ್ತದೆ ಎಂದರು.
ನಿವೃತ್ತ ಅಧ್ಯಾಪಕ ಅಮರೇಗೌಡ ಮಾತನಾಡಿ ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಅಳವಡಿಸಿಕೊಂಡು ಸಾಗಲು ಈ ಘಟಕವು ಪ್ರೇರಣೆ ಒದಗಿಸುತ್ತದೆ. ಬಹಳ ಮುಖ್ಯವಾಗಿ ಕೂಡಿಬಾಳುವ ಸೌಹಾರ್ದತೆಯ ಮನೋಭಾವ ಕಲಿಸಿಕೊಡುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net