ಯುವಕರು ವಲಸೆ ಹೋಗದೆ ಕೃಷಿ ಮಾಡಿ: ಕುಲಪತಿ ಡಾ.ಎಸ್.ವಿ. ಸುರೇಶ

ಯುವಕರು ವಲಸೆ ಹೋಗದೆ ಕೃಷಿ ಮಾಡಿ: ಕುಲಪತಿ ಡಾ.ಎಸ್.ವಿ. ಸುರೇಶ
Published on

ಹಾಸನ: ಭಾರತ ಆಹಾರ ಉತ್ಪಾದನೆಯಲ್ಲಿ ಸ್ಪಾಲಂಬನೆಯೊಂದಿಗೆ ಹೊರ ದೇಶಕ್ಕೆ ರಫ್ತ್ತು ಮಾಡುತ್ತಿದ್ದು, ಗ್ರಾಮೀಣ ಯುವಕರು ವಲಸೆ ಹೋಗದೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಕುಲಪತಿ ಡಾ.ಎಸ್.ವಿ. ಸುರೇಶ ತಿಳಿಸಿದರು.
ಕೃಷಿ ವಿಶ್ವವಿದ್ಯಾನಿಲಯ ಇವರ ವತಿಯಿಂದ ಅರಸೀಕೆರೆ, ತಾಲ್ಲೂಕಿನ ಗಂಡಸಿ ಹ್ಯಾಂಡ್ ಪೋಸ್ಟ್ ಎ.ಪಿ.ಎಂ.ಸಿ. ಆವರಣದಲ್ಲಿ ಬುಧವಾರ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೆನರಾ ಬ್ಯಾಂಕ್, ಕೃಷಿ ಸಂಬಂಧಿತ ಇಲಾಖೆಗಳು ಚಗಚಗೆರೆ, ಮಂಜೇನಹಳ್ಳಿ, ಕುಡುಕುಂದಿ, ದೊಡ್ಡಯರಗನಾಳು, ಚಿಕ್ಕಾಯರಗನಾಳು ಮತ್ತು ಹಿರಿಸಮುದ್ರ ಗ್ರಾಮಸ್ಥರ ಸಹಯೋಗದೊಂದಿಗೆ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಆಯೋಜಿಸಲಾಗಿದ್ದ ಕೃಷಿ ವಸ್ತುಪ್ರದರ್ಶನ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶವು 1947 ರಲ್ಲಿ 53 ಮಿಲಿಯನ್ ಟನ್ ಆಹಾರ ಉತ್ಪಾದನೆ ಮಾಡುತ್ತಿತ್ತು. ಈಗ 323 ಮಿಲಿಯನ್ ಟನ್ ಧಾನ್ಯ ಉತ್ಪಾದನೆ ತಲುಪಿದ್ದು, ವೈಜ್ಞಾನಿಕ ಬೆಳೆಪದ್ದತಿ, ಕೃಷಿ ಸಂಕಷ್ಟಗಳ ಪರಿಹಾರ, ಪ್ರಯೋಗಿಕವಾಗಿ ಹಳ್ಳಿಗಳಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಇಂದು ಬೃಹತ್ ಕೃಷಿ ವಸ್ತು ಪ್ರದರ್ಶನ ಮತ್ತು 80 ರಿಂದ 100 ಮಳಿಗೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಹರ್ಷದಾಯಕ ಸಂಗತಿ ಎಂದರು.
ಕೃಷಿ ಕಾರ್ಯಾನುಭವ ಶಿಬಿರದ ಮುಖ್ಯಸ್ಥ ಡಾ. ಎಂ.ಎಚ್.ಶಂಕರ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಆರು ಹಳ್ಳಿಗಳಲ್ಲಿ ಯಶಸ್ವಿಯಾಗಿ ತೆಂಗಿನಲ್ಲಿ ಬಿಳಿ ನೊಣದ ಬಾಧೆಯ ಹತೋಟಿ, ಹೈನುಗಾರಿಕೆಯಲ್ಲಿ ಅಜೋಲ್ಲಾ, ಜಾನುವಾರು ತಪಾಸಣೆ ಶಿಬಿರ ಮಾನವ ಆರೋಗ್ಯ ಶಿಬಿರ, ತಂಗಿನ ಮರ ಹತ್ತುವ ಸಾಧನದ ಬಳಕೆಯ ಪ್ರಾತ್ಯಕ್ಷಿಕೆ, ಸಮಗ್ರ ಕೃಷಿ ಪದ್ಧತಿ, ಸಾವಯವ ಕೃಷಿ, ಜಲಾನಯನ ಅಭಿವೃದ್ಧಿ, ಕೃಷಿ ಯಾಂತ್ರೀಕರಣ, ಕೃಷಿ ಜೈವಿಕ ತಂತ್ರಜ್ಞಾನ, ಆಹಾರ ಮೌಲ್ಯವರ್ಧನೆ, ಜೇನು ಕೃಷಿ ಕಾರ್ಯಗಳ ಬೆಳೆ ವಿಚಾರ ಸಂಕೀರಣ ಸೇರಿದಂತೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದರ ಬಗ್ಗೆ ಉಲ್ಲೇಖಿಸಿದರು.
(ಕೃಷಿ), ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎಸ್.ಎನ್.ವಾಸುದೇವನ್ ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಸಿದ್ದಪಡಿಸಿದ ವಿವಿಧ ನೂತನ ತಳಿಗೊಳೊಂಡಂತೆ 52 ತಳಿಗಳ ಪ್ರಾತ್ಯಕ್ಷಿಕೆಗಳು, ಕೃಷಿ ವಿಜ್ಞಾನ ತಂತ್ರಜ್ಞಾನ ಮಾಹಿತಿ ಕೇಂದ್ರದ ಉಪಯುಕ್ತತೆ, ಕೇಂದ್ರ- ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿ ರೈತ ಸಮುದಾಯಕ್ಕೆ ಒದಗಿಸಿರುವುದರ ಬಗ್ಗೆ ಸಂತೋಷ ವ್ಯಕ್ತ ಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ರಾಜೀವ್, ಆರ್ಯುವೇದ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ನಿತಿನ್, ನಿವೃತ್ತ ಡೀನ್ ಡಾ. ಎಲ್. ಮಂಜುನಾಥ್, ಮಬಾರ್ ಗೋಲ್ಡ್ ಅಂಡ್ ಡೈಮೆಂಡ್ಸ್ ಶಾಖಾ ಮುಖ್ಯಸ್ಥ ದಯಾನಂದ ಸೇರಿಂದತೆ ಇತರರು ಇದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಕೃಷಿ ಮಾಹಿತಿ ಕೇಂದ್ರ, ಬೆಳೆ ಸಂಗ್ರಹಾಲಯ, ಖಾಸಗಿ ಮಳಿಗೆಗಳಿಗೆ, ಪ್ರಶಸ್ತಿ ನೀಡಿ ಗೌರವಿಸಲಾಯಿತು.ವಸ್ತು ಪ್ರದರ್ಶನದಲ್ಲಿ 100 ಕ್ಕೂ ಹೆಚ್ಚು ಮಳಿಗೆಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದು 3000 ಕ್ಕೂ ಅಧಿಕ ರೈತರು ಕಾರ್ಯಕ್ರಮದ ಪ್ರಯೋಜನೆ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net