

ಚನ್ನಮ್ಮ ಕಿತ್ತೂರು: ಯುವಕರು ಸೇವಾ ಮನೋಭಾವನೆಯೊಂದಿಗೆ ರಾಷ್ಟ್ರಪ್ರೇಮ ಬೆಳೆಸಿಕೊಂಡು ಸಾಮಾಜಿಕ ಕಾರ್ಯಗಳಲ್ಲಿ ತೊಡಗಬೇಕು ಎಂದು ಕಿನಾವಿ ಸಂಘದ ಚೇರ್ಮನ್ ಜಗದೀಶ ವಸ್ತ್ರದ ಹೇಳಿದರು.
ಸಮೀಪದ ಉಗರಖೋಡ ಗ್ರಾಮದಲ್ಲಿ ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಉಗರಖೋಡ ಗ್ರಾಪಂ ಅಧ್ಯಕ್ಷ ಶಫೀಕ್ ಹವಾಲ್ದಾರ ಶಿಬಿರ ಉದ್ಘಾಟಿಸಿ ಮಾತನಾಡಿ, ನಾಯಕತ್ವ ಗುಣ ಬೆಳೆಸಿಕೊಳ್ಳಲು ಎನ್ನೆಸ್ಸೆಸ್ ಶಿಬಿರ ಉತ್ತಮ ವೇದಿಕೆ ಎಂದರು. ಸಂಸ್ಥೆಯ ಉಪಾಧ್ಯಕ್ಷ ಎ.ಸಿ. ಬಿಕ್ಕನ್ನವರ, ಕಾರ್ಯದರ್ಶಿ ಜೆ.ಎಸ್ ಬಿಕ್ಕನ್ನವರ ಹಾಗೂ ನಿರ್ದೇಶಕರಾದ ಡಿ.ಎಲ್.ಪಾಟೀಲ, ವಿ.ಆರ್.ಪಾಟೀಲ, ಐ.ಕ್ಯೂ.ಎ.ಸಿ ಚೇರ್ಮನ್ ಪ್ರೊ.ಆರ್.ಬಿ.ಹವಿನಾಳೆ, ಗ್ರಂಥಪಾಲಕ ಪ್ರೊ.ಎಸ್.ಡಿ. ಶಹಾಪೂರಮಠ, ಉಪಶಿಬಿರಾಧಿಕಾರಿ ಡಾ.ಬಿ.ಜಿ.ನಂದನ, ಪ್ರೊ.ಎ.ಕೆ.ಕರೆಪ್ಪನ್ನವರ, ಪ್ರೊ.ಎಸ್.ವಿ.ಹೊನ್ನರಾಜು,
ಪ್ರೊ.ಎನ್.ಜಿ.ಪಾಟೀಲ ಇತರರು ಇದ್ದರು.
ಡಾ.ಜಿ.ಕೆ ಭೂಮನಗೌಡರ ಸ್ವಾಗತಿಸಿದರು. ಪ್ರೊ.ಎಚ್.ಕೆ. ನಾಗರಾಜ ಪ್ರಾಸ್ತಾವಿಕ ಮಾತನಾಡಿದರು. ಅನುಷಾ ಕಮ್ಮಾರ ಪ್ರಾರ್ಥನಾ ಗೀತೆ ಹಾಡಿದರು. ಸ್ವಯಂ ಸೇವಕಿಯರು ಎನ್‌ಎಸ್‌ಎಸ್ ಗೀತೆ ಹಾಡಿದರು. ಪ್ರೊ.ಸಿ.ಎಂ.ಗರಗದ ನಿರೂಪಿಸಿದರು. ಸ್ವಯಂ ಸೇವಕ ರಾಮಕುಮಾರ ವಂದಿಸಿದರು.