ಯುವಕರು ಧರ್ಮದ ತಳಹದಿಯಲ್ಲಿ ನಡೆಯಲಿ

Let the youth walk on the foundation of religion
ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಸೋಮವಾರ ಕಲಬುರಗಿ ಶರಣ ಬಸವೇಶ್ವರ ಪುರಾಣ ಪ್ರವಚನ ಆರಂಭಗೊಂಡಿತು. ಬಬಲೇಶ್ವರ ಬ್ರಹ್ಮಮಠದ ಪೀಠಾಧಿಪತಿ ಡಾ. ಮಹಾದೇವ ಶಿವಾಚಾರ್ಯರು, ಶಂಕರಯ್ಯ ಹಿರೇಮಠ, ಚನ್ನಮಲ್ಲಯ್ಯ ಮಠ, ರಾಚಯ್ಯ ಮಠಪತಿ, ನಿಂಗಪ್ಪ ಬೆಳ್ಳುಬ್ಬಿ ಇತರರಿದ್ದರು.
Published on

ಬಬಲೇಶ್ವರ: ತಾಲೂಕಿನ ಕಾರಜೋಳ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿದ್ದ ಶ್ರೀ ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನಕ್ಕೆ ಸೋಮವಾರ ಬಬಲೇಶ್ವರ ಬ್ರಹ್ಮಮಠದ ಪೀಠಾಧಿಪತಿ ಡಾ. ಮಹಾದೇವ ಶಿವಾಚಾರ್ಯರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಜಿಲ್ಲೆಯು ಶರಣನಾಡು, ಇಲ್ಲಿ ಜನ್ಮ ತಾಳಿರುವ ನಾವು ಪುಣ್ಯವಂತರು. ಯುವಕರು ಧರ್ಮದ ತಳಹದಿಯನ್ನು ಅರಿತುಕೊಂಡು ಜೀವನ ಸಾಗಿಸಬೇಕು. ಯುವಕರಿಗೆ ಪ್ರೇರಣೆ ನೀಡಲು ಮೊದಲ ಬಾರಿಗೆ ಕಾರಜೋಳದಲ್ಲಿ ಪುರಾಣ ಪ್ರವಚನ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ಈ ಪುರಾಣ ಪ್ರವಚನವು ಪ್ರತಿವರ್ಷ ಮುಂದುವರೆಯಲಿ ಎಂದು ಆಶಿಸಿದರು.

ಗ್ರಾಮದಲ್ಲಿ ಕಡುಬಡತನದಲ್ಲಿ ಜನಿಸಿ ಕಷ್ಟಪಟ್ಟು ಅಭ್ಯಾಸ ಮಾಡಿ ಉನ್ನತ ಸ್ಥಾನಕ್ಕೇರಿದ ಚಂದ್ರಶೇಖರ ನಾಗರಾಳ ಅವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು, ಗ್ರಾಮದಲ್ಲಿ ಬಾಲ್ಯದಲ್ಲಿ ಪಟ್ಟ ಕಷ್ಟ ಕಾರ್ಪಣ್ಯಗಳನ್ನು ನೆನೆದು ಭಾವುಕರಾದರು. ಸಾಧಿಸುವ ಛಲವಿದ್ದರೇ ಯಾರು ಬೇಕಾದರೂ ಏನ್ನನ್ನಾದರೂ ಸಾಧಿಸಬಹುದು. ಅದಕ್ಕೆ ನಾನೇ ಉದಾಹರಣೆ. ಯುವಕರು ದುಶ್ಚಟಗಳಿಗೆ ಬಲಿಯಾಗಬೇಡಿ. ಹೆತ್ತ ತಂದೆ-ತಾಯಿಯರನ್ನು ವೃದ್ದಾಪ್ಯದಲ್ಲಿ ಉತ್ತಮವಾಗಿ ನೋಡಿಕೊಂಡು ಅವರ ಋಣ ತೀರಿಸಿ ಎಂದರು.

ಪುರಾಣ ಪ್ರವಚನಕಾರ ಡಾ. ಪುಟ್ಟರಾಜ ಗವಾಯಿಗಳ ಶಿಷ್ಯರಾದ ಪಂಡಿತ ಶಂಕರಯ್ಯ ಹಿರೇಮಠ ಪ್ರವಚನ ನೀಡಿದರು.

ಗ್ರಾಪಂ ಮಾಜಿ ಅಧ್ಯಕ್ಷ ಚನ್ನಮಲ್ಲಯ್ಯ ಮಠ, ರಾಚಯ್ಯ ಮಠಪತಿ, ನಿಂಗಪ್ಪ ಬೆಳ್ಳುಬ್ಬಿ, ಸುರೇಶ ನಾಗರಾಳ, ಕಲ್ಲನಗೌಡ ಪಾಟೀಲ, ಮಲ್ಲಿಕಾರ್ಜುನ ಭಗವತಿ, ದುಂಡಪ್ಪ ಅವಟಿ, ದುಂಡಯ್ಯ ಹಿರೇಮಠ, ರುದ್ರಯ್ಯ ಮಠ, ರಾಮಪ್ಪ ಪಾಯಣ್ಣಿ, ಸಿದ್ದಪ್ಪ ಪುಠಾಣಿ, ಸಾಬಣ್ಣ ಬಡಿಗೇರ, ಜಂಗ್ಲಿಸಾಬ ಮುಳವಾಡ, ರಾಮು ಕರಂಡಿ, ನಾಗರಾಜ ಮುದಕವಿ, ಸಿದ್ದಪ್ಪ ಹಲಗಣಿ, ಪಿಂಟೂ ರಜಪೂತ, ಶಂಕರ ಉಪ್ಪಾರ, ಸತ್ಯಪ್ಪ ಮಹಾರಾಜ ರಾಮಾವಧೂತ ಮಠ, ಗಿರೀಶ ಅವಟಿ, ಮಹಾಂತೇಶ ಪೂಜಾರಿ, ಶಂಕರ ಜಮಾತಾರ, ಸದಾಶಿವ ಪಾಯಣ್ಣಿ, ಬಸಪ್ಪ ಯರಗಲ್ಲ, ಮಲ್ಲಪ್ಪ ಪುಠಾಣಿ, ಪಿಂಟೂ ಗೊಳಸಂಗಿ, ಹನುಮಂತ ತೇಲಿ, ಮಲ್ಲಪ್ಪ ಯರಗಲ್ಲ, ಹಾಗೂ ಗ್ರಾಮಸ್ಥರು ಇದ್ದರು. ಒಂದು ತಿಂಗಳ ಕಾಲ ಪುರಾಣ ಪ್ರವಚನ ನಡೆಯಲಿದೆ. ಶ್ರೀಶೈಲ ಹಡಗಲಿಗಿ ಸಂಗೀತ, ಸುರೇಶ ಬಳ್ಳಾರಿ ತಬಲಾ ಸಾತ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net