ಯುವಕರು ದೇಶಾಭಿಮಾನ ಬೆಳಸಿಕೊಳ್ಳಿ

4 mlv 3
Published on

ಮಂಡ್ಯ : ವ್ಯಾಮೋಹ ಬದಿಗೊತ್ತಿ, ಜೀವದ ಹಂಗು ತೊರೆದು ಯೋಧರು ಗಡಿ ಕಾಯುತ್ತಿರುವುದರಿಂದ ದೇಶದೊಳಗೆ ಎಲ್ಲ ವರ್ಗದ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಎಂದು ನಿವೃತ್ತ ಯೋಧ ಕೆ.ನಾಗರಾಜು ಅಭಿಪ್ರಾಯಪಟ್ಟರು.


ಸೇನೆಯ ಸೇವಾವಧಿ ಪೂರೈಸಿ ಮಳವಳ್ಳಿಗೆ ಮರಳಿ ಆಗಮಿಸಿದ ಅವರಿಗೆ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.


ಕಳೆದ 41 ವರ್ಷಗಳಿಂದ ದೇಶದ ಜಮ್ಮು, ಕಾಶ್ಮೀರ ಸೇರಿದಂತೆ ಹಲವು ಗಡಿ ಭದ್ರತಾಪಡೆಯಲ್ಲಿ ನಿಷ್ಠೆಯಿಂದ ಸೇವೆ ಮಾಡಿದ್ದು, ನನಗೆ ತೃಪ್ತಿ ನೀಡಿದೆ. ಸೇನೆಯಲ್ಲಿ ದೇಶಕ್ಕಾಗಿ ಜೀವ ಪಣಕ್ಕಿಟ್ಟು ಕೆಲಸ ಮಾಡುವುದರಲ್ಲಿ ಸಿಗುವ ಸಂತೋಷ ಮತ್ತೊಂದರಲ್ಲಿ ಇರುವುದಿಲ್ಲ. ಇಂದಿನ ಯುವ ಪೀಳಿಗೆ ದೇಶಾಭಿಮಾನ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ಸಾರ್ವಜನಿಕ ಕುರುಬರ ಸೊಸೈಟಿ ಅಧ್ಯಕ್ಷ ನಾಗರಾಜು, ಮುಖಂಡರಾದ ರಾಚೇಗೌಡ, ಡೇರಿ ಮಾದೇವು, ಸುರೇಶ, ಶಿವಣ್ಣ, ಚಲುವರಾಜು, ಲಿಂಗರಾಜು, ಚನ್ನಯ್ಯ, ಮಹೇಶ್, ನವೀನ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net