ಯುವಕರು ದೇಶಭಕ್ತಿ ಮೈಗೂಡಿಸಿಕೊಳ್ಳಲಿ

kalavidar sang
Published on

ಬೀದರ್: ಯುವಕರಿಗೆ ಸ್ವಾತಂತ್ರ್ಯ ಹೋರಾಟಗಾರರು ಮಾದರಿಯಾಗಬೇಕು. ಯುವ ಸಮುದಾಯ ದೇಶಭಕ್ತಿ ಬೆಳೆಸಿಕೊಳ್ಳಬೇಕು ಎಂದು ಸಿದ್ಧಾರ್ಥ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಗೋಪಾಲ ಬಡಿಗೇರ ಹೇಳಿದರು.
ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರ ನಾಗಪುರ, ಕನರ್ಾಟಕ ಬರಹಗಾರರು ಮತ್ತು ಕಲಾವಿದರ ಸಂಘದಿಂದ ನಗರದ ಕನರ್ಾಟಕ ಜಾನಪದ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ನಮ್ಮ ಮಣ್ಣು-ನಮ್ಮ ದೇಶ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹಲವರು ತ್ಯಾಗ, ಬಲಿದಾನ ಮಾಡಿದ್ದಾರೆ. ಆದ್ದರಿಂದ ಇಂದು ನಾವು ಸುಖವಾಗಿದ್ದೇವೆ. ಯುವಜನತೆ ದೇಶಭಕ್ತಿ ಮೈಗೂಡಿಸಿಕೊಂಡು ಸದೃಢ ಭಾರತ ನಿಮರ್ಾಣಕ್ಕೆ ಪಣ ತೊಡಬೇಕು ಎಂದು ಕಿವಿಮಾತು ಹೇಳಿದರು.
ಜಗತ್ತಿನಲ್ಲಿ ಹೆಚ್ಚು ಜನಸಂಖ್ಯೆ ಮತ್ತು ಅಧಿಕ ಯುವ ಸಮೂಹ ಹೊಂದಿರುವ ದೇಶ ಭಾರತ. ಶ್ರೀಮಂತ ಸಂಸ್ಕೃತಿ, ಸಂಸ್ಕಾರ ಮತ್ತು ಸಂಪನ್ಮೂಲ ಹೊಂದಿರುವ ದೇಶದಲ್ಲಿ ಯುವಕರು ತಮ್ಮ ಸಾಧನೆ ಜತೆಗೆ ದೇಶ ಸೇವೆಗಾಗಿ ಮುಂದೆ ಬರಬೇಕಿದೆ. ರಾಷ್ಟ್ರ ಭಕ್ತಿ ನಮ್ಮ ನರನಾಡಿಗಳಲ್ಲಿ ಇರಬೇಕು. ಭಾರತಾಂಬೆ ಸೇವೆಗಾಗಿ ದುಡಿಯುವ ಹುಮ್ಮಸ್ಸು ನಮ್ಮಲ್ಲಿರಬೇಕು. ರಾಷ್ಟ್ರದ ಐಕ್ಯತೆ, ಸೌಹಾರ್ದತೆಗೆ ಧಕ್ಕೆ ತರುವಂಥವರಿಗೆ ಶಿಕ್ಷೆ ಕೊಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಕನರ್ಾಟಕ ಬರಹಗಾರರು ಮತ್ತು ಕಲಾವಿದರ ಸಂಘದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿ, ದೇಶಕ್ಕಾಗಿ ಬಲಿದಾನಗೈದ ವೀರಯೋಧರ ಸ್ಮರಣೆಗಾಗಿ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮಗಳನ್ನು ಕೇಂದ್ರ ಸಕರ್ಾರ ಆಯೋಜಿಸುತ್ತಿದ್ದು, ಇದೊಂದು ವಿನೂತನ ಕಾರ್ಯಕ್ರಮವಾಗಿದೆ. ನಮಗಾಗಿ ದೇಶ ಏನು ಮಾಡಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾವೇನು ಮಾಡುತ್ತಿದ್ದೇವೆ ಎಂಬ ಭಾವ ಯುವಕರಲ್ಲಿ ಬರಬೇಕು. ದೇಶ ಮೊದಲು ಎಂಬ ವಿಚಾರ ಯುವಕರಲ್ಲಿ ಮೂಡಿದಾಗಲೇ ಭಾರತ ವಿಶ್ವದಲ್ಲಿ ಬೆಳಗಲು ಸಾಧ್ಯ ಎಂದು ಪ್ರತಿಪಾದಿಸಿದರು.
ನಿವೃತ್ತ ಪ್ರಾಧ್ಯಾಪಕ ವಿನೋದಕುಮಾರ ಮೂಲಗೆ ಮಾತನಾಡಿದರು. ಡಾ.ಸುನೀತಾ ಕೂಡ್ಲಿಕರ್, ಡಾ.ಸಾವಿತ್ರಿಬಾಯಿ ಹೆಬ್ಬಾಳೆ, ಪವನ್ ನಾಟೇಕಾರ್, ಮಾನಾ ಸಂಗೀತಾ, ಮಹಾರುದ್ರ ಡಾಕುಳಗೆ, ಪ್ರಕಾಶ ಕುಚಬಾಳ ಇತರರಿದ್ದರು. ಎಸ್.ಬಿ. ಕುಚಬಾಳ ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕ ಡಾ.ರಾಜಕುಮಾರ ಹೆಬ್ಬಾಳೆ ನಿರೂಪಣೆ ಮಾಡಿದರು. ಶಿವಶರಣಪ್ಪ ಗಣೇಶಪುರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net