ಯುವಕರು ಕ್ರೀಡೆಗಳಲ್ಲಿ ಪಾಲ್ಗೊಳ್ಳಿ

15Kagwad1
ಮೋಳೆ ಗ್ರಾಮದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಮುಕ್ತ ಕಬ್ಬಡಿ ಪಂದ್ಯಾವಳಿಗೆ ಶ್ರೀನಿವಾಸ ಪಾಟೀಲ ಚಾಲನೆ ನೀಡಿದರು. ಶ್ರೀಶೈಲ ತುಗಶೆಟ್ಟಿ, ಅಪ್ಪಾಸಾಬ ಮಳಮಳಸಿ, ತಮ್ಮಣ್ಣ ಪಾರಶೆಟ್ಟಿ, ಸಿದ್ದಪ್ಪ ಪೂಜಾರಿ ಇತರರಿದ್ದರು.
Published on

ಕಾಗವಾಡ: ಯುವಕರು ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದು ಅಥಣಿ ಶುಗರ್ಸ್‌ ನಿರ್ದೇಶಕ ಶ್ರೀನಿವಾಸ ಪಾಟೀಲ ಹೇಳಿದರು.

ಸಮೀಪದ ಮೋಳೆ ಗ್ರಾಮದ ಶ್ರೀ ಓಘ ಸಿದ್ಧೇಶ್ವರ 8ನೇ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಮುಕ್ತ ಕಬಡ್ಡಿ ಟೂರ್ನಾಮೆಂಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಯುವಕರ ಪ್ರತಿಭೆಯನ್ನು ಹೊರಹಾಕಲು ಕ್ರೀಡಾಕೂಟಗಳು ಪೂರಕವಾಗಿವೆ. ಕ್ರೀಡಾಪಟುಗಳು ಸೋಲು ಗೆಲುವುಗಳನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಬೇಕು ಎಂದರು.

ಯುವಮುಖಂಡ ಅಪ್ಪಾಸಾಬ ಮಳಮಳಸಿ ಮಾತನಾಡಿ, ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಗಳನ್ನು ಏರ್ಪಡಿಸಿ ಯುವಕರಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಸುತ್ತಿರುವ ಕಾರ್ಯ ಶ್ಲಾಘನೀಯ. ತನು, ಮನ, ಧನ ನೀಡಿದ ಶಾಸಕ ಶ್ರೀಮಂತ ಪಾಟೀಲ ಹಾಗೂ ಶ್ರೀನಿವಾಸ ಪಾಟೀಲರ ಕೊಡುಗೆ ಅಪಾರ ಎಂದರು.

ಗಾಪಂ ಅಧ್ಯಕ್ಷ ಭೂತಾಳಿ ಥರಥರೆ ಮಾತನಾಡಿದರು. ಶ್ರೀಶೈಲ ತುಗಶೆಟ್ಟಿ, ತಮ್ಮಣ್ಣ ಪಾರಶೆಟ್ಟಿ, ಸಿದ್ದಪ್ಪ ಪೂಜಾರಿ, ಸುರೇಶ ಬಳೋಜೆ, ಬಸವರಾಜ ಮುದವಿ, ಪಿಂಟು ಮುಂಜೆ, ದೀಪಕ ಪಾಟೀಲ, ಸುಧಾಕರ ಚೋರಮುಲೆ, ಸಂಜಯ ತೆಲಸಂಗ, ಪರಶುರಾಮ ಆನದಿನ್ನಿ, ಲಕ್ಷ್ಮಣ ಹಳಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net