ಯುವಕರಿಗೆ ಪ್ರೋತ್ಸಾಹ ಸಿಗಲಿ

WhatsApp Image 2024-08-05 at 2.48.07 PM
Published on

ಬಳ್ಳಾರಿ : ಇತ್ತೀಚಿನ ದಿನಗಳಲ್ಲಿ ಯುವಕರು ನಾಟಕ ರಂಗಕ್ಕೆ ಬರಲು ಪೋಷಕರು ಪ್ರೋತ್ಸಾಹಿಸಬೇಕು ಎಂದು ನಿವೃತ್ತ ಮುಖ್ಯ ನ್ಯಾಯಾಧೀಶೆ ಡಾ.ಮಂಜುಳಾ ಚೆಲ್ಲೂರು ಅಭಿಪ್ರಾಯಪಟ್ಟರು.
ನಗರದ ರಾಘವ ಕಲಾಮಂದಿರದಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ದಿಂದ ಆಯೋಜಿಸಿದ್ದ ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವರ 144ನೇ ಜಯಂತಿಯ ಅಂಗವಾಗಿ ಎರಡನೇ ದಿನದ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ನಾಟಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಂದು ಕಣ್ಣಿನಲ್ಲಿ ಶಾಂತಿಯು ಇನ್ನೊಂದು ಕಣ್ಣಲ್ಲಿ ಕ್ರೋಧವನ್ನು ತೋರಿಸುವ ನಟನೆ ರಾಘವರಿಗೆ ಮಾತ್ರ ಸಾಧ್ಯ. ಕಾಲಕ್ಕೆ ತಕ್ಕ ಹಾಗೆ ನಾಟಕಗಳು ಸಹ ಬದಲಾಗಬೇಕು ಎಂದರು.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಅಂತರಾಷ್ಟ್ರೀಯ ನಟ ವಾಡ್ರೇವು ಸುಂದರ ರಾವ್ ರವರು ಮಾತನಾಡಿ, ಬಳ್ಳಾರಿಯಲಿ ರಾಘವ ಕಲಾಮಂದಿರ ಸ್ಥಾಪನೆಯಾದ ದಿನದಿಂದ ನಾಟಕಕ್ಕೆ ಕಲಾವಿದರಿಗೆ ಮರು ಜೀವ ಬಂದಿದೆ. ಜಿಲ್ಲೆಯಲ್ಲಿ ನಾಟಕದ ವೈಭವವನ್ನು ಹೆಚ್ಚಿಸಿದ ಕೀರ್ತಿ ರಾಘವರಿಗೆ ಸಲ್ಲುತ್ತದೆ ರಾಘವರ ನಟನೆಯನ್ನು ನೋಡಿದ ವಿದೇಶಿ ನಾಟಕಕಾರರೊಬ್ಬರು ನೀವು ನಮ್ಮ ದೇಶಕ್ಕೆ ಬಂದರೆ ಶೇಕ್ಸಪಿಯರ್ ನನ್ನ ಮೀರಿಸುತ್ತಿದ್ದೀರಿ ಎಂದು ಹೇಳಿದರು ಎಂದರು.
ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿ ವಿಜೇತ ಕೊನೇಟಿ ಸುಬ್ಬರಾಜು ಮಾತನಾಡಿ, ನಾಟಕ ಸಿದ್ಧತೆ ಮಾಡಿ ಪ್ರದರ್ಶಿಸುವವರೆಗೆ ಹಲವಾರು ತೊಂದರೆಗಳು ಬರುತ್ತವೆ. ನಾಟಕ ಪ್ರದರ್ಶನವಾದ ಮೇಲೆ ಉಂಟಾಗುವ ಸಂತೋಷ ಬೇರೆಲ್ಲೂ ಸಿಗುವುದಿಲ್ಲ. ರಂಗಭೂಮಿಯಲ್ಲಿ ರಾಘವರು ಬಹುದೊಡ್ಡ ಸಾಧಕರು ಅಂಥವರ ಹೆಸರಿನಲ್ಲಿ ನನಗೆ ಪ್ರಶಸ್ತಿ ಲಭಿಸಿರುವುದು ನನ್ನ ಜನ್ಮ ಜನ್ಮದ ಪುಣ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net