

ಗದಗ: ಕರೊನಾ ವೈರಸ್ನಿಂದ 21 ದಿನಗಳ ಕಾಲ ಭಾರತ ಲಾಕ್ಡೌನ್ ಇರುವುದರಿಂದ ಗದಗ ಬೆಟಗೇರಿಯಲ್ಲಿ ಬೀದಿ ದನಕರುಗಳಿಗೆ ಸ್ವಾತಂತ್ರ್ಯ ಹೋರಾಟಗಾರ ಭಗತಸಿಂಗ್ ಅಭಿಮಾನಿ ಬಳಗದ ಪದಾಧಿಕಾರಿಗಳು ಮೇವು ಒದಗಿಸುವ ಸೇವೆ ಆರಂಭಿಸಿದ್ದಾರೆ.
ಕಳೆದ 14 ದಿನಗಳಿಂದ ನಿತ್ಯ ರಾತ್ರಿ 12ರಿಂದ 3 ಗಂಟೆವರೆಗೂ ನಗರದ ಒಕ್ಕಲಗೇರಿ ಓಣಿ ರಾಚೋಟೇಶ್ವರ ದೇವಸ್ಥಾನ ಮುಂಭಾಗ, ಮತ್ತು ತಿಲಕಪಾರ್ಕ್, ಗ್ರೇನ್ ಮಾರ್ಕೆಟ್, ಶಹಪೂರಪೇಟೆ, ಪಂಚಾಕ್ಷರಿ ನಗರ, ರೈಲ್ವೆ ಸ್ಟೇಷನ್, ಕುರಟ್ಟಿ ಪೇಟೆ, ಪೊಲೀಸ್ ಕ್ವಾಟರ್ಸ್, ಬೆಟಗೇರಿ ಬಸ್ ನಿಲ್ದಾಣ, ಬೆಟಗೇರಿ ರಾಮಮಂದಿರ, ಖಾನತೋಟದಲ್ಲಿರುವ ಬೀದಿ ದಿನಕರುಗಳಿಗೆ ಮೇವು ಹಾಕಲಾಗುತ್ತಿದೆ. 15-20 ಯುವಕರು ಒಕ್ಕಲಗೇರಿ ಓಣಿಯಲ್ಲಿ ಮೇವನ್ನು ತುಂಡರಿಸಿ ಗಾಡಿಯಲ್ಲಿ ತೆಗೆದುಕೊಂಡು ಹೋಗಿ ದನಗಳಿಗೆ ಹಾಕುತ್ತಿದ್ದಾರೆ.
ಶಿವಕುಮಾರ ತಡಕೋಡ, ಮಂಜು ಮುಳಗುಂದ, ಸೋಮು, ಮಂಜು ಹಿತ್ತಲಮನಿ, ರವಿ ಹುಡೇದ, ನವೀನ ಕಾತಿ, ಕುಮಾರ ಲಕ್ಕುಂಡಿ, ಪರಶುರಾಮ ಹೊಂಬಳ, ಕುಮಾರ ಮೆಣಸಗಿ, ಕಿರಣ ಕಮತರ, ಸತೀಶ ಕೊಟಗಿ, ಆಕಾಶ ಯಲಿಗಾರ, ಸಚಿನ ಮೆಣಸಗಿ, ಮಾರುತಿ ಗುರಿಕಾರ ಮತ್ತಿತರರು ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.