

ಪಟ್ಟನಾಯಕನಹಳ್ಳಿ: ವಾಲಿಬಾಲ್ ಪಂದ್ಯಾವಳಿಗಳು ಗ್ರಾಮಗಳಲ್ಲಿನ ಯುವಕರ ಸ್ನೇಹ ವೃದ್ಧಿಗೆ ಸಹಕಾರಿಯಾಗುತ್ತವೆ. ಕ್ರೀಡೆಯಲ್ಲಿ ಸೋಲು, ಗೆಲುವು ಸಹಜ ಎಂದು ಕಾಂಗ್ರೆಸ್ ಯುವ ನಾಯಕ ಸಂಜಯ್ ಜಯಚಂದ್ರ ಹೇಳಿದರು.ಶಿರಾ ತಾಲೂಕಿನ ಚಂಗಾವರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ವಾಲಿಬಾಲ್ ಲೀಗ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಶಿರಾ ೇತ್ರ ಅಭಿವೃದ್ಧಿಯತ್ತ ಮುನ್ನಡೆಯುತ್ತಿದ್ದು, ಶಾಸಕ ಟಿ.ಬಿ.ಜಯಚಂದ್ರ ಅವರು ತಾಲೂಕಿಗೆ ಹೇಮಾವತಿ ನೀರು ಹರಿಸಿದ ಕಾರಣ ಕಳ್ಳಂಬೆಳ್ಳ ಕೆರೆ ಭರ್ತಿಯಾಗಿ ಮದಲೂರು ಕೆರೆಗೆ ಅತಿ ಶ್ರೀದಲ್ಲಿ ಹೇಮಾವತಿ ನೀರು ಹರಿಯಲಿದೆ. ಸತತ 22 ವರ್ಷಗಳಿಂದ ಶಿರಾ ೇತ್ರಕ್ಕೆ ಹೇಮಾವತಿ ನೀರು ಹರಿದು ಅಂತರ್ಜಲ ಹೆಚ್ಚಳವಾಗಿರುವ ಕಾರಣ ಕುಡಿಯುವ ನೀರಿನ ಬರ ನೀಗಿದೆ. ಶಿರಾ ಮನಸ್ಸಿನಲ್ಲಿರುವ ನಿಜವಾದ ಭಗೀರಥ ಜಯಚಂದ್ರ ಎಂದರು.ಶಿರಾ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಮಾತನಾಡಿ, ಗ್ರಾಮೀಣ ಪ್ರದೇಶದ ಯುವಕರಲ್ಲಿ ಉತ್ತಮ ಪ್ರತಿಭೆಗಳಿದ್ದು, ಇಂತಹ ವಾಲಿಬಾಲ್ ಪಂದ್ಯಾವಳಿಗಳು ಯುವಕರ ಕ್ರೀಡಾಸಕ್ತಿಯನ್ನು ಹೆಚ್ಚಿಸಿ, ಪ್ರತಿಭೆಯನ್ನು ಅನಾವರಣಗೊಳಿಸುತ್ತದೆ. ಹಳ್ಳಿ ಸೊಗಡಿನ ಕಬಡ್ಡಿ ಕ್ರೀಡೆ ಬಗ್ಗೆ ಆಸಕ್ತಿವಹಿಸುವ ಅವಶ್ಯಕತೆ ಇದೆ ಎಂದರು.