ಯುವಕನಿಗೆ ಅವಕಾಶ ಕೊಟ್ಟಿದೆ ಬಿಜೆಪಿ

Doddaballapura - amit Sha
Amit sha statement in Doddabllapura - BJP Oppertunity in youth
Published on


ದೊಡ್ಡಬಳ್ಳಾಪುರ
ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಪರ ಕೇಂದ್ರ ಗೃಹ ಸಚಿವ ಅಮಿತ್ ಷಾ ನಗರದಲ್ಲಿ ಭಾನುವಾರ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು.
ನಗರದ ಮುಗುವಾಳಪ್ಪ ವೃತ್ತದಿಂದ ಆರಂಭಗೊಂಡ ರೋಡ್ ಶೋಗೆ ಕಾರ್ಯಕರ್ತರು ರಸ್ತೆಯುದ್ದಕ್ಕೂ ನಿಂತು ಭರ್ಜರಿ ಸ್ವಾಗತ ಕೋರಿದರು. ಈ ವೇಳೆ ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದ ಜನಸ್ತೋಮಕ್ಕೆ ಕೈಬೀಸಿ ಹಾರೈಸಿದರು. ಮುಗುವಾಳಪ್ಪ ಸರ್ಕಲ್ ನಿಂದ ಆರಂಭವಾದ ರೋಡ್ ಶೋ ತಾಲೂಕು ಕಚೇರಿ ಮೂಲಕ ಹಾದು ಅಂಬೇಡ್ಕರ್ ರಸ್ತೆ ಮೂಲಕ ಜಿ.ರಾಮೇಗೌಡ ವೃತ್ತದಲ್ಲಿ ಮುಕ್ತಾಯಗೊಂಡಿತು.
ರೋಡ್ ಶೋ ಮುಕ್ತಾಯದ ಬಳಿಕ ಮಾತನಾಡಿದ ಅಮಿತ್ ಶಾ, ಬಿಜೆಪಿ ಉತ್ಸಾಹಿ ಯುವಕನಿಗೆ ಅವಕಾಶ ಕೊಟ್ಟಿದೆ. ನೀವು ಯುವ ನಾಯಕನಿಗೆ ಅವಕಾಶ ನೀಡಿ. ಒಂದು ಲಕ್ಷ ಮತಗಳಿಂದ ಗೆಲ್ಲಿಸುತ್ತೀರಾ? ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ತರುತ್ತೀರಾ..? ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡ್ತೀರಾ ಎಂದು ಕೇಳಿ ಕಾರ್ಯಕರ್ತರ ಉತ್ಸಾಹ, ಹುಮ್ಮಸ್ಸು ಹೆಚ್ಚಿಸಿದರು. ಇದಕ್ಕೆ ಪ್ರತಿಯಾಗಿ ಕಾರ್ಯಕರ್ತರು ಬಿಜೆಪಿ ಗೆಲ್ಲಿಸುತ್ತೇವೆ ಎಂದು ೋಷಣೆ ಕೂಗಿದರು.
ಅಭ್ಯರ್ಥಿ ಧೀರಜ್ ಮುನಿರಾಜು ಮಾತನಾಡಿ, ತಾಲೂಕಿನ ಜನತೆ ಬದಲಾವಣೆ ಬಯಸಿದ್ದು, ಕಳೆದ 3 ವರ್ಷಗಳಿಂದ ಕ್ಷೇತ್ರದಲ್ಲಿ ಸಲ್ಲಿಸಿರುವ ಸಾಮಾಜಿಕ ಕೆಲಸಗಳು ನನ್ನ ಕೈ ಹಿಡಿಯಲಿವೆ. ಯುವ ಜನತೆ, ಮಹಿಳಾ ಮತದಾರರು ಸಂಪೂರ್ಣ ಬಿಜೆಪಿ ಬೆಂಬಲಿಸುವ ಭರವಸೆ ಇದೆ ಎಂದರು.ಮುಖಂಡರಾದ ಕೆ.ಎಂ. ಹನುಮಂತರಾಯಪ್ಪ, ಬಿಸಿ ನಾರಾಯಣಸ್ವಾಮಿ, ಪುಷ್ಪಾ ಶಿವಶಂಕರ್, ಲಕ್ಷ್ಮೀನಾರಾಯಣ್, ನಾರಾಯಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net