ಆಸಿಡ್ ದಾಳಿ,ಮೂವರ ಬಂಧನ

Acid Attack
Published on

ಚಿತ್ರದುರ್ಗ: ಹಿರಿಯೂರಲ್ಲಿ ಈಚೆಗೆ ಯುವಕನೊಬ್ಬನ ಮೇಲೆ ಆಸಿಡ್ ದಾಳಿ ನಡೆಸಿದ್ದ ಮೂವರು ಆರೋಪಿಗಳನ್ನು ಹಿರಿಯೂರು ನಗರ ಪೊಲೀ ಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಹೊಳಲ್ಕೆರೆ ನಿವಾಸಿ ಎ.ಅರುಣ್‌ಕುಮಾರ್(29)ಅವರು, ಜ.16ರಂದು ಹೊಳಲ್ಕೆರೆಯಿಂದ ಬೆಂಗಳೂರಿಗೆ ತೆರಳುತ್ತಿದ್ದು ಮಾರ್ಗ ಮಧ್ಯೆ ಹಿರಿಯೂರಿನ ಶೌಚಗೃಹಕ್ಕೆ ತೆರಳಿ ಹಿಂತಿರುಗುತ್ತಿದ್ದಾಗ, ಬೈಕ್‌ನಲ್ಲಿದ್ದ ಇಬ್ಬರು ಯುವಕರು ಆಸಿಡ್ ಎರಚಿ ಪರಾರಿಯಾಗಿದ್ದರು.
ತೀವ್ರವಾಗಿ ಗಾಯಗೊಂಡಿದ್ದ ಅರುಣ್‌ಕುಮಾರ್‌ರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಕರಣ ದಾಖಲಿಸಿ ಕೊ ಂಡು ತನಿಖೆ ನಡೆಸಿದ್ದ ಪೊಲೀಸರು,ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಖಾಸಗಿ ಕಂಪನಿಯೊಂದರ ಇಂಜಿನಿಯರ್,ತು ಮಕೂರು ಬಾರ್‌ಆ್ಯಂಡ್ ರೆಸ್ಟೋರೆಂಟ್‌ವೊಂದರ ಮಾಲೀಕನೂ ಆಗಿರುವ ಟಿ.ಎಸ್.ಪ್ರಜ್ವಲ್(25),ಕೊರಟಗೆರೆ ತಾಲೂಕು ಮುಗ್ಗೊಂ ಡನಹಳ್ಳಿಯ ನಿತೀನ್‌ಕುಮಾರ್(28)ಹಾಗೂ ಹಿರಿಯೂರು ತಾಲೂಕು ಹರ್ತಿಕೋಟೆಯ ಆರ್.ಗಿರೀಶ್(27)ರನ್ನು ಬಂಧಿಸಿದ್ದಾರೆ.
ತಾನು ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದು,ತನಗೆ ಆಗದವರು ಈ ದಾಳಿ ನಡೆಸಿದ್ದಾರೆಂದು ಗಾಯಾಳು ಪೊಲೀಸರಿಗೆ ದೂರು ನೀಡಿ ದ್ದ ಎಂದು ಎಸ್‌ಪಿ ಧರ್ಮೆಂದರ್‌ಕುಮಾರ್ ತಿಳಿಸಿದ್ದಾರೆ. ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಡಿವೈಎಸ್‌ಪಿ ಚೈತ್ರಾ ನೇತೃತ್ವ ತನಿಖಾ ತಂಡದ ಕಾರ‌್ಯವನ್ನು ಎಸ್‌ಪಿ ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net