ಚಾಮರಾಜನಗರ: ಕರ್ನಾಟಕದ ಸಾಮಾಜಿಕ ,ಸಾಂಸ್ಕೃತಿಕ ಮತ್ತು ಕನ್ನಡ ಚಿತ್ರರಂಗ ಕ್ಷೇತ್ರಗಳಲ್ಲಿ ಡಾ. ರಾಜಕುಮಾರ್ ಕುಟುಂಬದ ಪ್ರಭಾವ ಅಪಾರವಾಗಿದೆ. ರಾಜ್‌ಕುಮಾರ್ ಒಂದು ತಲೆಮಾರಿನ ಜನರ ಮೇಲೆ ಪ್ರಭಾವ ಬೀರಿದರೆ, ಪುನೀತ್ ರಾಜಕುಮಾರ್ ಅವರು ಪ್ರಸ್ತುತ ಸಮಾಜದಲ್ಲಿ ವಿಶೇಷವಾಗಿ ಯುವ ಶಕ್ತಿಯಲ್ಲಿ ಅಪಾರ ಪ್ರಭಾವ ಬೀರಿದರು ಎಂದು ಸಂಸ್ಕೃತಿ ಚಿಂತಕ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಋಗ್ವೇದಿ ತಿಳಿಸಿದರು.
ನಗರದ ಶಂಕರಪುರ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಸೋಮವಾರ ಆಯೋಜಿಸಿದ್ದ ಸ್ಪೂರ್ತಿ ದಿನ ಹಾಗೂ ಪುನೀತ್ ರಾಜಕುಮಾರ್ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಭಾವ ಕುರಿತು ಕಾರ್ಯಕ್ರಮದಲ್ಲಿ ಅವರ ಮಾತನಾಡಿದರು.
ಪುನೀತ್ ವಿಶ್ವದ ಶ್ರೇಷ್ಠ ನಟರಾಗಿ ಮಾನವೀಯ ಮೌಲ್ಯದ ಚಿಂತಕರಾಗಿ ಸೇವೆ ಸಲ್ಲಿಸಿರುವುದನ್ನು ಮರೆಯಲಾಗದು. ಪ್ರತಿ ವ್ಯಕ್ತಿಯು ತನ್ನ ಬದುಕಿನ ಕ್ಷಣಗಳಲ್ಲಿ ಸಮಾಜಕ್ಕೆ, ಸಂಸ್ಕೃತಿ, ಪರಂಪರೆಗೆ ಕುಟುಂಬಕ್ಕೆ ಗೌರವವನ್ನು ನೀಡಿ ಬೆಳವಣಿಗೆಯನ್ನು ಸಾಧಿಸಿ ಸದಾ ಕಾಲ ಜೀವಂತಿಕೆಯ ಕಾರ್ಯವನ್ನು ಮಾಡುವುದು ಬಹು ಮುಖ್ಯ ಎಂದರು. ಹಿರಿಯ ನಾಗರೀಕ ವೆಂಕಟೇಶ್ ಮಾತನಾಡಿದರು. ಮುರುಗೇಶ್, ರವಿ, ಮನೋಜ್, ವಿಶ್ವಾಸ್, ಕಾರ್ತಿಕ್, ಮಾದಪ್ಪ , ಮಹಾದೇವ ಶೆಟ್ಟಿ, ಲೋಕೇಶ್ ಇದ್ದರು.