ಯುವ ವೈದ್ಯರಿಗೆ ವಿಚಾರ ಸಂಕಿರಣ ಸಹಕಾರಿ

5Ckd50
Published on

ಚಿಕ್ಕೋಡಿ: ಸಂಧಿವಾತ ಮತ್ತು ಕೀಲು ಸಂಬಂಧಿ ಕಾಯಿಲೆಗಳ ಆಧುನಿಕ ಮತ್ತು ಆಯುರ್ವೇದ ನಿರ್ವಹಣೆ ಕುರಿತು ಇಂದಿನ ಯುವ ವೈದ್ಯರಿಗೆ ಅರಿತುಕೊಳ್ಳಲು ವಿಚಾರ ಸಂಕಿರಣ ಮತ್ತು ಉಪನ್ಯಾಸ ಕಾರ್ಯಕ್ರಮ ಸಹಕಾರಿಯಾಗಿವೆ ಎಂದು ಕೆಎಲ್ಇ ಆಸ್ಪತ್ರೆಯ ಎಲುಬು ಕೀಲು ತಜ್ಞ ಡಾ.ಅಭಿಷೇಕ ರಾಯ್ಕರ ಹೇಳಿದರು.

ತಾಲೂಕಿನ ಕೆಎಲ್ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ರೋಗನಿಧಾನ ಮತ್ತು ವಿಕೃತಿ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಧಿ ವಿವೇಕ-೨೦೨೫ ರಾಜ್ಯಮಟ್ಟದ ಆಯುರ್ವೇದ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೈದ್ಯಕೀಯ ನಿರ್ದೇಶಕ ಡಾ.ಕಿರಣಕುಮಾರ ಮುತ್ನಾಳಿ ಮಾತನಾಡಿ, ಸಮ್ಮೇಳನವು ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಮುಂದಾಳತ್ವದಲ್ಲಿ ನಡೆದಿದ್ದು, ಇದು ಸಂಧಿವಾತ ಮುಂತಾದ ಕಾಯಿಲೆಗಳಲ್ಲಿ ಆಯುರ್ವೇದದ ಪ್ರಾಮುಖ್ಯತೆ ಮತ್ತು ಸಮಗ್ರ ಚಿಕಿತ್ಸೆ ಅಗತ್ಯತೆಯ ಶ್ರೇಷ್ಠ ವೇದಿಕೆಯಾಗಿದೆ ಎಂದರು.

ಡಾ.ಅರ್ಚನಾ ಉಪ್ಪಿನ ಸಂಧಿವಾತದ ಆಧುನಿಕ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದರು. ರೇಡಿಯಾಲಜಿಸ್ಟ್ ಡಾ.ಸಚಿನ ಖಟಕಲ್ಲೇ ಸಂಧಿ ಸಂಬಂಧಿ ಕಾಯಿಲೆಗಳ ಚಿತ್ರಣಗಳ ಕುರಿತು ಉಪನ್ಯಾಸ ನೀಡಿದರು. ಫೈಟೋ-ಫಾರ್ಮಾ ಮ್ಯಾನೇಜರ್ ಡಾ.ಶ್ರೀಹರಿ ಟಾಕಿಲ್ಕರ್ ಸಂಧಿವಾತದ ಚಿಕಿತ್ಸೆ ಔಷಧಿಗಳ ತಯಾರಿ ಕುರಿತು ವಿವರಿಸಿದರು. ಕೊಡೋಲಿಯ ಡಾ.ರವಿ ಪಾಟೀಲ ಪಂಚಕರ್ಮದಲ್ಲಿ ಸಂಧಿವಾತದ ಚಿಕಿತ್ಸೆ ಬಗ್ಗೆ ಉಪನ್ಯಾಸ ನೀಡಿದರು. ಪೋಸ್ಟರ್ ಸ್ಪರ್ಧೆಯಲ್ಲಿ ವಿವಿಧ ಆಯುರ್ವೇದ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮ್ಮೇಳನದಲ್ಲಿ ರಾಜ್ಯದ ವಿವಿಧ ಆಯುರ್ವೇದ ಮಹಾವಿದ್ಯಾಲಯಗಳ ೪೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೇರ ಪ್ರಸಾರ ವೀಕ್ಷಿಸಿದರು. ಅಧ್ಯಾಪಕರು ಮತ್ತು ವೈದ್ಯರು ಭಾಗವಹಿಸಿದರು. ವಿಶಾಲ ನಿರೂಪಿಸಿದರು. ವೈಷ್ಣವಿ ಸ್ವಾಗತಿಸಿದರು, ಸೌಮ್ಯಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net