ಯುವ ವಿಜ್ಞಾನಿಗಳಿಗೆ ಕಾದಿವೆ ಉತ್ತಮ ಅವಕಾಶ

ctd.....01
Published on

ಚಿತ್ರದುರ್ಗ: ಇಸ್ರೋ, ಡಿಆರ್‌ಡಿಒದಂಥ ದೇಶದ ಖ್ಯಾತ ವೈಜ್ಞಾನಿಕ ಸಂಸ್ಥೆಗಳಲ್ಲಿ ಯುವ ವಿಜ್ಞಾನಿಗಳಿಗೆ ಉತ್ತಮ ಅವಕಾಶವಿದೆ ಎಂದು ದೇವರಾಜ ಅರಸು ಶಿಕ್ಷಣ ಸಂಸ್ಥೆ ಬಿ.ಇಡಿ ಕಾಲೇಜು ಪ್ರಾಚಾರ‌್ಯ ಡಾ.ಅನಂತರಾಮು ಹೇಳಿದರು.

ಶಿಕ್ಷಣ ಸಂಸ್ಥೆ 42ನೇ ವರ್ಷದ ಅಂಗವಾಗಿ ಬುಧವಾರ ಸಿಬಿಎಸ್‌ಇ ಪ್ರೌಢಶಾಲೆ ಇಂಗ್ಲಿಷ್ ಮಾಧ್ಯಮ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವೈಜ್ಞಾನಿಕ ಸಂಶೋಧನೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಿವೆ. ಇಂಥ ಪ್ರದರ್ಶನಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಕಾರಿಯಾಗಿವೆ ಎಂದರು.

ಚಿತ್ರದುರ್ಗ ಡಯಟ್ ಉಪನ್ಯಾಸಕಿ ಕೆ.ಎ. ಪದ್ಮಾ, ಕಡ್ಲೆಗುದ್ದು ಆಂಜನೇಯ ಸ್ವಾಮಿ ಪ್ರೌಢಶಾಲೆ ಮುಖ್ಯಶಿಕ್ಷಕ ಡಾ.ಮಹೇಶ್,ತೀರ್ಪುಗಾರರಾದ ಹಾಲೇಶ್, ದತ್ತಾತ್ರೇಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net