ಯುವ ರೈತ ಶವವಾಗಿ ಪತ್ತೆ

2109kamalapur01
Published on

ಕಮಲಾಪುರ: ಭಾನುವಾರ ರಾತ್ರಿ ಹಳ್ಳದ ನೀರಿನಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ಪೀರಶೆಟ್ಟಿ ಹಣಮಂತ ಬೋಧನವಾಡಿ (28) ಎಂಬ ಯುವಕ ಸೋಮವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.
ಪೀರಶೆಟ್ಟಿ ಎಂಬಾತ ಹೊಲದಲ್ಲಿ ಕೃಷಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದ. ಹಳ್ಳದಲ್ಲಿ ನೀರು ಕಡಿಮೆಯಿದೆ ಎಂದು ತಿಳಿದು ಬೈಕ್ ಚಲಾಯಿಸಿಕೊಂಡು ಹೋಗಿದ್ದಾನೆ. ಅರ್ಧ ದಾರಿಯಲ್ಲಿ ಹೋಗಿದ್ದು, ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಬೈಕ್ ಅನ್ನು ಎತ್ತಿಕೊಂಡು ಚಾಲು ಮಾಡಲು ಯತ್ನಿಸಿದ್ದು, ಆದರೆ ಇಂಜಿನ್ ಆರಂಭವಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕಾಗಮಿಸಿ ಹಗ್ಗದ ಸಹಾಯದಿಂದ ಪೀರಶೆಟ್ಟಿಯನ್ನು ಕಾಪಾಡಲು ಯತ್ನಿಸಿದ್ದಾರೆ. ಆದರೆ ನೀರಿನ ರಭಸದಿಂದ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ. ಭಾನುವಾರ ತಡರಾತ್ರಿವರೆಗೂ ಪೊಲೀಸರು, ಎನ್ಡಿಆರ್ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಪೀರಶೆಟ್ಟಿ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದು, ಶವವಾಗಿ ಪತ್ತೆಯಾಗಿದ್ದಾನೆ. ತಹಸೀಲ್ದಾರ್ ಅಂಜುಮ್ ತಬಸುಮ್ ಸ್ಥಳಕ್ಕೆ ಭೇಟಿ ಸಮಗ್ರ ಮಾಹಿತಿ ಪಡೆದರು.

ಶ್ರೀಚಂದ ಗ್ರಾಮದ ಯುವಕ ಹಳ್ಳದಲ್ಲಿ ಸಿಲುಕಿ ಮೃತಪಟ್ಟಿರುವ ವಿಷಯ ತಿಳಿದು ದುಃಖವಾಗಿದೆ. ಯುವಕನ ಕುಟುಂಬಕ್ಕೆ ಸಕರ್ಾರದಿಂದ ಸೂಕ್ತ ಸೌಕರ್ಯ ದೊರಕಿಸಿಕೊಡಲು ಶ್ರಮಿಸುತ್ತೇನೆ. | ಬಸವರಾಜ ಮತ್ತಿಮೂಡ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net