ಯುವ ಮೋರ್ಚಾದಿಂದ ರಕ್ತದಾನ ಶಿಬಿರ

d-r-h241_400x400
Published on

ಬೀದರ್: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ಯುವ ಮೋರ್ಚಾದ ಜಿಲ್ಲೆಯ ಎಂಟು ಮಂಡಲಗಳಿಂದ ಸೆ. 17 ಮತ್ತು 21 ರಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಯುವ ಮೋರ್ಚಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜನಾರ್ಧನ್ ರೆಡ್ಡಿ ತಿಳಿಸಿದ್ದಾರೆ.
ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಶೇಕಾಪುರ ಅವರ ನೇತೃತ್ವದಲ್ಲಿ ಸೆ. 17 ರಂದು ಬೆಳಿಗ್ಗೆ 10.30ಕ್ಕೆ ಯುವ ಮೋರ್ಚಾ ನಗರ ಮಂಡಲ ವತಿಯಿಂದ ಬೀದರ್‍ನ ಸಿದ್ಧಾರೂಢ ಆಸ್ಪತ್ರೆ, ಬೀದರ್ ದಕ್ಷಿಣ ಮಂಡಲ, ಬೀದರ್ ಗ್ರಾಮಾಂತರ ಮಂಡಲ ವತಿಯಿಂದ ಗುರುನಗರದ ಕೇರ್ ಅಸ್ಪತ್ರೆ (ಮಾರುತಿ ಕಾಂಪೌಂಡರ್ ಆಸ್ಪತ್ರೆ) ಹಾಗೂ ಭಾಲ್ಕಿ ಮಂಡಲ ವತಿಯಿಂದ ಭಾಲ್ಕಿ ಪಟ್ಟಣದ ಹುಮನಾಬಾದ್ ರಸ್ತೆಯಲ್ಲಿ ಇರುವ ಮಹೇಶ ಭಾಲ್ಕೆ ಆಸ್ಪತ್ರೆಯಲ್ಲಿ ಶಿಬಿರ ನಡೆಯಲಿದೆ ಎಂದು ಹೇಳಿದ್ದಾರೆ.
ಉಳಿದ ನಾಲ್ಕು ಮಂಡಲಗಳ ವತಿಯಿಂದ ಸೆ. 21 ರಂದು ಶಿಬಿರ ಜರುಗಲಿದೆ ಎಂದು ತಿಳಿಸಿದ್ದಾರೆ.
ಯುವ ಮೋರ್ಚಾ ಕಾರ್ಯಕರ್ತರು ರಕ್ತದಾನ ಮಾಡಿ, ಪ್ರಧಾನಿ ಅವರ ಜನ್ಮದಿನವನ್ನು ಅವಿಸ್ಮರಣೀಯವಾಗಿಸಬೇಕು ಎಂದು ಮನವಿ ಮಾಡಿದ್ದಾರೆ.
ರಕ್ತದಾನಕ್ಕಾಗಿ ಯುವ ಮೋರ್ಚಾ ಬೀದರ್ ನಗರ ಮಂಡಲ ಅಧ್ಯಕ್ಷ ವಿಶಾಲ್ ಅತಿವಾಳ (8431578574), ಬೀದರ್ ದಕ್ಷಿಣ ಮಂಡಲ ಅಧ್ಯಕ್ಷ ಸಾಯಿನಾಥ ಪಾಟೀಲ (7411922287), ಬೀದರ್ ಗ್ರಾಮಾಂತರ ಮಂಡಲ ಅಧ್ಯಕ್ಷ ಸಂತೋಷ್ ಕಾಳೆ (9535852787), ಭಾಲ್ಕಿ ಮಂಡಲ ಅಧ್ಯಕ್ಷ ಸಂಗಮೇಶ ಟೆಂಕಾಳೆ (9986373123) ಅವರನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net