ಯುವ ನಾಯಕರಿಗೆ ಪಾಟೀಲ್ ಪರಿವಾರ ಪ್ರೇರಣೆ

1508 Chincholi 03
Published on

ಚಿಂಚೋಳಿ: ಕಲ್ಯಾಣ ಕರ್ನಾಟಕಕ್ಕೆ ಮಾಜಿ ಸಚಿವ ದಿ.ವೈಜನಾಥ ಪಾಟೀಲ್ ಸಾಕಷ್ಟು ಕೊಡುಗೆ ನೀಡಿದ್ದು, ಅವರಿಗೆ ಬೆನ್ನೆಲುಬಾಗಿ ಪತ್ನಿ ಜ್ಞಾನೇಶ್ವರಿ ಕೆಲಸ ಮಾಡಿದ್ದರು ಎಂದು ಶಾಸಕ ಡಾ.ಅವಿನಾಶ ಜಾಧವ್ ಸ್ಮರಿಸಿದರು.

ಮಾಜಿ ಸಚಿವ ವೈಜನಾಥ ಪಾಟೀಲ್ ಸ್ಮಾರಕದ ಬಳಿ ಜ್ಞಾನೇಶ್ವರಿ ಪಾಟೀಲ್ ಅವರ ದ್ವಿತೀಯ ಪುಣ್ಯಸ್ಮರಣೆ ನಿಮಿತ್ತ ಕೇತಕಿ ಸಂಗಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಗಳವಾರ ಏರ್ಪಡಿಸಿದ್ದ ರಕ್ತಹೀನತೆ ಮತ್ತು ಶಸ್ತçಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಕಲ್ಯಾಣ ಕರ್ನಾಟಕದ ಯುವ ನಾಯಕರಿಗೆ ಪಾಟೀಲ್ ಪರಿವಾರ ಪ್ರೇರಣೆಯಾಗಿದೆ. ಅಲ್ಲದೆ ಕೇತಕಿ ಆಸ್ಪತ್ರೆ ಆರಂಭಿಸಿ ಕ್ಷೇತ್ರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದೆ. ಬಡ ಜನರ ಆರೋಗ್ಯ ಕಾಪಾಡಲು ನಿರಂತರ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಕೊಂಡಾಡಿದರು.

ಆರ್‌ಎಸ್‌ಎಸ್ ಪ್ರಮುಖ ಅಶೋಕ ಪಾಟೀಲ್ ಮಾತನಾಡಿದರು. ಪ್ರಮುಖರಾದ ಡಾ.ವಿಕ್ರಮ ಪಾಟೀಲ್, ಚಂದ್ರಶೇಖರ ಹರಸೂರ, ಸುರೇಶ ಪಾಟೀಲ್, ಲಿಂಗಶೆಟ್ಟಿ ತಟ್ಟೆಪಲ್ಲಿ, ಮಧುಸೂದನರೆಡ್ಡಿ ಕಲ್ಲೂರ, ಚಿತ್ರಶೇಖರ ಪಾಟೀಲ್, ಡಾ.ಬಸವೇಶ ಪಾಟೀಲ್, ಭೀಮಶೆಟ್ಟಿ ಮುರುಡಾ, ಗೌತಮ ಪಾಟೀಲ್, ಕುಪೇಂದ್ರ ಪಾಟೀಲ್, ಬಸವರಾಜ ಕೇರಳ್ಳಿ, ಶಾಮರಾವ ಕೊರವಿ, ಸಂತೋಷ ಗಡಂತಿ, ಅಬ್ದುಲ್ ಬಾಶೀದ್, ಶಾಂತವೀರ ಹೀರಾಪುರ, ಶರಣಪ್ಪ ತಳವಾರ, ಪ್ರಭುಲಿಂಗ ಲೇವಡಿ, ಭವಾನಿರಾವ ಪಾಟೀಲ್, ಗೋಪಾಲರೆಡ್ಡಿ ಕೊಳ್ಳೂರ, ಬಸವರಾಜ ಸುಲೇಪೇಟ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net