ಯುವ ಜನತೆ ನ್ಯಾಯಾಂಗ ಸೇವೆಗೆ ಮುಂದಾಗಲಿ

5sgr1
ಸಾಗರದ ವಕೀಲರ ಭವನದಲ್ಲಿ ವಕೀಲರ ಸಂಘದಿಂದ ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರನ್ನು ಅಭಿನಂದಿಸಲಾಯಿತು. ಎಸ್.ನಟರಾಜ್, ಕೆ.ಆರ್.ದೀಪಾ, ಎಂ.ಬಿ.ಮಾದೇಶ ಇತರರಿದ್ದರು.
Published on

ಸಾಗರ: ನ್ಯಾಯಾಂಗ ಸೇವೆಗೆ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಕಾನೂನು ಸೇವೆಯನ್ನು ಕೇವಲ ಉದ್ಯೋಗವಾಗಿ ನೋಡಬೇಡಿ, ಪ್ರಾಮಾಣಿಕತೆ, ಸಹನೆ ಮತ್ತು ಕಠಿಣ ಪರಿಶ್ರಮ ಈ ವೃತ್ತಿಯ ಮೂಲ ಅಸ. ಅಧ್ಯಯನಕ್ಕೆ ಆದ್ಯತೆ ನೀಡಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಜೆ.ಎಂ.ಖಾಜಿ ಹೇಳಿದರು.

ಸಾಗರದ ವಕೀಲರ ಭವನದಲ್ಲಿ ಶನಿವಾರ ವಕೀಲರ ಸಂಘ ಆಯೋಜಿಸಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನ್ಯಾಯಾಂಗ ಸೇವೆ ಎಂದರೆ ಕೇವಲ ತೀರ್ಪುಗಳನ್ನು ನೀಡುವುದಲ್ಲ. ನ್ಯಾಯಾಂಗ ಸೇವೆ ನ್ಯಾಯಕ್ಕಾಗಿ ಬಾಗಿಲು ತಟ್ಟುವ ಪ್ರತಿಯೊಬ್ಬ ನಾಗರಿಕನ ಬದುಕನ್ನು ಸ್ಪರ್ಶಿಸುವ ಹೊಣೆಯಾಗಿರುತ್ತದೆ ಎಂದು ತಿಳಿಸಿದರು.

ಶಿವಮೊಗ್ಗ, ಸಾಗರದ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುವಾಗ ಕಾನೂನು ಸೇವೆಯನ್ನು ಆಳವಾಗಿ ಅಧ್ಯಯನ ಮಾಡಲು ಅವಕಾಶ ದೊರೆಯಿತು. ಸಾಗರ ನ್ಯಾಯಾಂಗ ಸೇವೆಗೆ ಮಾತ್ರವಲ್ಲದೇ ಸಾಹಿತ್ಯ ಮತ್ತು ನಿಸರ್ಗ ಪ್ರೇಮಕ್ಕೂ ಸಾಕ್ಷಿಯಾಗಿದೆ. ನ್ಯಾಯಾಂಗ ಮತ್ತು ವಕೀಲ ವೃತ್ತಿ ಸಮಾಜದ ಎರಡು ಪ್ರಮುಖ ಸ್ತಂಭಗಳು. ವಕೀಲರು ತಮ್ಮ ವಾದಗಳ ಮೂಲಕ ಸತ್ಯವನ್ನು ಬೆಳಗಿಸುತ್ತಾರೆ. ನ್ಯಾಯಾೀಶರು ತೀರ್ಪುಗಳ ಮೂಲಕ ಅದಕ್ಕೆ ರೂಪ ನೀಡುತ್ತಾರೆ. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಜನಸಾಮಾನ್ಯರ ಹಕ್ಕುಗಳನ್ನು ಕಾಪಾಡಿ ಸಮಯಕ್ಕೆ ಸರಿಯಾಗಿ ನ್ಯಾಯದಾನ ನೀಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ಗಿರೀಶ್ ಗೌಡ, ಬೆಂಗಳೂರು ವಕೀಲರ ಪರಿಷತ್‌ನ ಎಂ.ದೇವರಾಜ್, ನ್ಯಾಯಾೀಶರಾದ ಎಸ್.ನಟರಾಜ್, ಕೆ.ಆರ್.ದೀಪಾ, ಎಂ.ಬಿ.ಮಾದೇಶ, ಪ್ರಮುಖರಾದ ಶೇಖರಪ್ಪ, ಪರಿಮಳ, ಎಂ.ಬಿ.ಪುಟ್ಟಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net