ಯುವ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ : ಸಾಹಿತಿ ಮಂಜು ಕೋಡಿಉಗನೆ ಅಭಿಪ್ರಾಯ

10 yelandur 01
Published on

ಚಾಮರಾಜನಗರ : ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಯುವಕರ ತಂಡವನ್ನು ಜನರು ಪ್ರೋತ್ಸಾಹಿಸಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಹಾಗೂ ಸಾಹಿತಿ ಮಂಜು ಕೋಡಿಉಗನೆ ಹೇಳಿದರು.


‘ಕಾಣಿಯಾಗಿದ್ದಾಳೆ’ ಚಿತ್ರತಂಡದ ವತಿಯಿಂದ ಬುಧವಾರ ಯಳಂದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.


ಯುವಸಮೂಹ ಕನ್ನಡ ಚಲನಚಿತ್ರ ರಂಗಕ್ಕೆ ಹೆಚ್ಚಾಗಿ ಬರಬೇಕು. ನೂತನ ಕಥೆ, ಗೀತೆ, ಸಾಹಿತ್ಯ ರಚನೆ ಮಾಡಿ ಬೆಳೆಸುವುದರ ಜತೆಗೆ, ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡುವ ಕೆಲಸವಾಗಬೇಕು. ಇದರಿಂದ ಕನ್ನಡ ಚಲನಚಿತ್ರಗಳು ಮತ್ತಷ್ಟು ಬೆಳವಣಿಗೆಯಾಗುತ್ತವೆ ಎಂದರು.


ನಿರ್ದೇಶಕ ಆರ್.ಕೆ.ರಾಜು ಕಾರ್ತಿಕ್ ಮಾತನಾಡಿ, ಚಾಮರಾಜನಗರ ಜಿಲ್ಲೆ ಕಲೆಗಳ ತವರೂರು. ಇಲ್ಲಿನವರಾದ ಡಾ.ರಾಜಕುಮಾರ್, ಅವಿನಾಶ್ ಸೇರಿದಂತೆ ಅನೇಕರು ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ಕನ್ನಡ ಚಿತ್ರಗಳನ್ನು ಚಿತ್ರಮಂದಿರದಲ್ಲೇ ನೋಡಬೇಕು. ನಮ್ಮ ತಂಡಕ್ಕೆ ಪ್ರೇಕ್ಷಕರು ಬೆಂಬಲ ನೀಡಬೇಕೆಂದು ಕೋರಿದರು.


ಚಿತ್ರದ ನಾಯಕ ನಟ ವಿನಯ್‌ಕುಮಾರ್, ನಟಿ ಕೀರ್ತಿಭಟ್, ಪ್ರತಿಧ್ವನಿ ಕಲಾ ವೇದಿಕೆ ಅಧ್ಯಕ್ಷ ಎಸ್.ಜೈಗುರು, ವಜ್ರಮುನಿ, ವಿಜಯ್, ಹರಿಕೃಷ್ಣ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net