ಯುಪಿಎಸ್‌ಸಿ ತರಬೇತಿಗೆ ಜುಲೈ 2ರಂದು ಅರ್ಹತಾ ಪರೀಕ್ಷೆ

ಯುಪಿಎಸ್‌ಸಿ ತರಬೇತಿಗೆ ಜುಲೈ 2ರಂದು ಅರ್ಹತಾ ಪರೀಕ್ಷೆ
Published on

  ಹಾಸನ: ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ವಾಸವಿ ಅಕಾಡಮಿ ವತಿಯಿಂದ ಲೋಕಸೇವಾ ಆಯೋಗ ನಡೆಸುವ ಐಎಎಸ್, ಐಪಿಎಸ್ ಪರೀಕ್ಷೆಗೆ ಉಚಿತ ತರಬೇತಿ ನೀಡುತ್ತಿದ್ದು, ಆರ್ಹ ವಿದ್ಯಾರ್ಥಿಗಳ ಆಯ್ಕೆಗೆ ಜುಲೈ 2 ರಂದು ಪ್ರವೇಶ ಪರೀಕ್ಷೆ ಹಮ್ಮಿಕೊಳ್ಳಾಗಿದೆ ಎಂದು ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್ ತಿಳಿಸಿದರು.

ಎಲ್ಲಾ ವರ್ಗದ ಅಭ್ಯರ್ಥಿಗಳು ಉಚಿತ ತರಬೇತಿಗೆ ಅರ್ಹರಾಗಿದ್ದು, ಕಡ್ಡಾಯವಾಗಿ ಅರ್ಹತಾ ಪರೀಕ್ಷೆ ಬರೆಯಬೇಕು. ಆಯ್ಕೆಯಾದವರಿಗೆ ಉಚಿತ ತರಬೇತಿ, ಊಟ, ವಸತಿ ಸೌಲಭ್ಯಗಳನ್ನು ಒದಗಿಸಲಾಗುವುದು. ಆಸಕ್ತರು ಜೂ.25ರ ಒಳಗೆ ನೋಂದಾಯಿಸಿಕೊಂಡು ಪರೀಕ್ಷೆಗೆ ಹಾಜರಾಗಬಹುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರಿನಲ್ಲಿರುವ ವಾಸವಿ ಅಕಾಡಮಿ ಮೂಲಕ ನಮ್ಮ ಸಂಸ್ಥೆಯಿಂದ ಹಲವು ಸಮಾಜಿಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಐಎಎಸ್, ಐಪಿಎಸ್ ಇತರೆ ಉನ್ನತ ಹುದ್ದೆಗಳಿಗೆ ಉತ್ತರ ಭಾರತದವರೇ ಬಹುಪಾಲು ಆಯ್ಕೆಯಾಗುತ್ತಿದ್ದು, ನಮ್ಮ ರಾಜ್ಯದ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇದೆ. ಇದನ್ನು ಮನಗಂಡು ಕರ್ನಾಟಕದ ಅಭ್ಯರ್ಥಿಗಳಿಗೆ ಉತ್ತಮ ಗುಣಮಟ್ಟದ ತರಬೇತಿ ನೀಡುವ ಮೂಲಕ ಉತ್ತೇಜಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.

ಜುಲೈ.2 ರಂದು ಬೆಂಗಳೂರಿನಲ್ಲಿ ಅರ್ಹತಾ ಪರೀಕ್ಷೆ ನಡೆಯಲಿದ್ದು, ರಾಜ್ಯದ ಎಲ್ಲಾ ಭಾಗದ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಆನ್‌ಲೈನ್ ಅರ್ಜಿ ಸಲ್ಲಿಕೆ ಹಾಗು ಹೆಚ್ಚಿನ ಮಾಹಿತಿಗಾಗಿ 8073499217ಗೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಹಾಸಭಾ ಪದಾಧಿಕಾರಿಗಳಾದ ಪಾರ್ಥಸಾರಥಿ, ರಮೇಶ್, ಪಿ.ಜಿ.ಶ್ರೀಕಾಂತ್, ಕೆ.ಆರ್.ನಾರಾಯಣ, ಲಲಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net