ಯುಪಿಎಸ್‌ಸಿ ಟಾಪರ್‌ ವಿರುದ್ಧ ಮಹಿಳೆ ದೂರು

Published on

ಬಳ್ಳಾರಿ : ಕುರುಗೋಡು ತಾಲೂಕಿನ ಗೆಣಿಕೆಹಾಳು ಗ್ರಾಮದ ಯುಪಿಎಸ್‌ಸಿ ರ್‍ಯಾಂಕ್‌ ವಿಜೇತ ಕುರುಬರ ಶಾಂತಪ್ಪ ವಿರುದ್ಧ ಸಂಬಂಧಿ ಮಹಿಳೆಯೊಬ್ಬಳು ಅಸಭ್ಯವಾಗಿ ವರ್ತಿಸಿದ ಆರೋಪದಡಿ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸಗೆಣಿಕೆಹಾಳು ಗ್ರಾಮಕ್ಕೆ ಆಗಮಿಸಿದ ವೇಳೆ ತನ್ನೊಂದಿಗೆ ಸಲುಗೆ ಮತ್ತು ಅಸಭ್ಯವಾಗಿ ಶಾಂತಪ್ಪ ವರ್ತಿಸುತ್ತಿದ್ದರು. ಕೆಎಎಸ್ ಪರೀಕ್ಷೆಗೆ ಮಾರ್ಗದರ್ಶನ ಮತ್ತು ಪುಸ್ತಕಗಳನ್ನು ಕೊಡುವುದಾಗಿ ಹೇಳಿ ಮಾರ್ಚ್-ಏಪ್ರಿಲ್ ತಿಂಗಳ ಒಂದು ದಿನ ಚಿತ್ರದುರ್ಗಕ್ಕೆ ಕರೆಸಿಕೊಂಡು ಲಾಡ್ಜ್‌ಗೆ ಹೋಗೋಣ ಬಾ ಎಂದು ಅಡ್ಡಗಟ್ಟಿ ಅಸಭ್ಯವಾಗಿ ವರ್ತಿಸಿದ್ದರು. ನಂತರ ಮೊಬೈಲ್‌ಗೆ ಕರೆ ಮಾಡಿ ಮೆಸೇಜ್ ಮಾಡುವಂತೆ ಹೇಳುತ್ತಿದ್ದರು. ಈ ವಿಷಯ ಪತಿ ದೇವರಾಜ್ ಅವರಿಗೆ ತಿಳಿದಿದೆ. ಈ ವಿಷಯದ ಬಗ್ಗೆ ಚರ್ಚಿಸಲು ಸ್ಥಳೀಯ ಹಿರಿಯರು ಶಾಂತಪ್ಪ ಅವರನ್ನು ಗ್ರಾಮಕ್ಕೆ ಕರೆಸಿ ವಿಚಾರಿಸಿದ್ದರು. ಆಗ ಪತಿಯೊಂದಿಗೆ ಜಗಳ ತೆಗೆದು, ಹಲ್ಲೆ ಮಾಡಿದ್ದರು. ನನ್ನ ಬಗ್ಗೆ ಅಸಭ್ಯವಾಗಿ ಮಾತನಾಡುತ್ತ, …

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net