

ಬಸವಕಲ್ಯಾಣ: ನಗರದ ಬಹುದಿನದ ಬೇಡಿಕೆಯಾದ ಸರ್ಕಾರಿ ಯುನಾನಿ ಮಹಾವಿದ್ಯಾಲಯವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಎಸ್‌ಐಒ ಬಸವಕಲ್ಯಾಣದ ಘಟಕದಿಂದ ಮಂಗಳವಾರ ಮಾಜಿ ಎಂಎಲ್ಸಿ ವಿಜಯಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಎಸ್‌ಐಒ ಜಿಲ್ಲಾಧ್ಯಕ್ಷ ಡಾ.ಜಬಿಉಲ್ಲಾ ಖಾನ್, ಸ್ಥಳೀಯ ಅಧ್ಯಕ್ಷ ಸಯ್ಯದ್ ಜಾವೀದ್, ಮುಖಂಡ ಮೀರ್ ತಹಸೀನ್ ಅಲಿ ಜಮಾದಾರ್ ಹಾಗೂ ಮುಖ್ತಾರ್ ಅಹಮದ್ ಇತರರಿದ್ದರು.