

ಮೈಸೂರು: ಯುದ್ಧವನ್ನು ಸಹ ನಿಲ್ಲಿಸುವ ಸಾಮರ್ಥ್ಯ ಕಲೆಗೆ ಇದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಎಚ್. ಮಹೇಂದ್ರ ಅಭಿಪ್ರಾಯಪಟ್ಟರು.
ನಗರದ ಆರ್ಟ್ ಮ್ಯಾಟರ್ಸ್, ಮೈಸೂರು ವಿಶ್ವ ವಿದ್ಯಾಲಯ ವತಿಯಿಂದ ಸ್ವಾತಂತ್ರೃದ ಅಮೃತ ಮಹೋತ್ಸವ ಪ್ರಯುಕ್ತ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಭಾನುವಾರ ಹಮ್ಮಿಕೊಂಡ ರಾಜ್ಯ ಮಟ್ಟದ ಕಾವಿಕಲೆ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನೆಪೋಲಿಯನ್ ಇಡೀ ಜಗತ್ತನೇ ಗೆಲ್ಲುತ್ತೇನೆ ಎಂದು ಹೊರಟು ಹಲವು ದೇಶಗಳನ್ನು ಗೆದ್ದು ಇಟಲಿಗೆ ತೆರಳಿ ಅಲ್ಲಿನ ಫ್ಲಾರೆನ್ಸ್ ನಗರ ವನ್ನು ವಶ ಪಡಿಸಿಕೊಳ್ಳುತ್ತಾನೆ. ಆ ಸಂದರ್ಭ ಆತನಿಗೆ ಚರ್ಚ್‌ಗೆ ಆಗಮಿಸುವಂತೆ ಆಹ್ವಾನ ದೊರೆಯುತ್ತದೆ. ಚರ್ಚ್‌ನಲ್ಲಿದ್ದ ಮೈಕೆಲ್ಯಾಂಜೆಲೊ ಅವರ ಚಿತ್ರವನ್ನು ನೋಡಿ ನೆಪೋಲಿಯನ್ ಸ್ತಂಭೀಭೂತನಾಗುತ್ತಾನೆ. ಆ ನಂತರ ನೆಪೋಲಿಯನ್ ಯುದ್ಧವನ್ನು ನಿಲ್ಲಿಸಿ ಫ್ಲಾರೆನ್ಸ್ ನಗರದಿಂದ ತೆರಳುತ್ತಾನೆ. ಕಲೆಗೆ ಅಂಥದೊಂದು ಶಕ್ತಿ ಇದ್ದು, ಕಲಾವಿದರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.