ಯುದ್ಧ ಚರಿತ್ರೆಗಳಲ್ಲಿ ಭೀಮಾ ಕೋರೆಗಾಂವ್ ಮಹತ್ವ

Published on

ಚಾಮರಾಜನಗರ: ಜಗತ್ತಿನ ಯುದ್ಧದ ಚರಿತ್ರೆಗಳಲ್ಲಿ ಭೀಮಾ ಕೋರೆಗಾಂವ್ ಯುದ್ಧ ಮಹತ್ವ ಪಡೆದಿದೆ ಎಂದು ಡಾ.ಶಿವಕುಮಾರ್ ನಂಜಾ ಮೇಸ್ತ್ರಿ ಕಾಗಲವಾಡಿ ಹೇಳಿದರು.

ನಗರದ ಸಾರನಾಥ ಬೌದ್ಧ ವಿಹಾರದಲ್ಲಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಭೀಮಾ ಕೋರೆಗಾಂವ್ ಭಾರತದ ಇತಿಹಾಸದಲ್ಲೇ ಹೆಸರಾದ ಕದನ ಹಾಗೂ ಭೂಮಿ ಇದು. ಅಸ್ಪೃಶ್ಯರ ಹಕ್ಕುಗಳಿಗೆ ತಳುಕು ಹಾಕಿಕೊಂಡಿರುವ ಸ್ಥಳವಿದು. 500 ಮಹಾರ್ ಸೈನಿಕರು ಆಹಾರ, ನೀರು ಹಾಗೂ ವಿಶ್ರಾಂತಿ ಇಲ್ಲದೆ 28 ಸಾವಿರ ಇದ್ದ ಸೈನ್ಯದ ವಿರುದ್ಧ ನಿರಂತರ 12 ಗಂಟೆಗಳ ಕಾದಾಡಿದ ಸ್ಮರಣೀಯ ಕದನ ಎಂದರು.

ಬಿಎಸ್‌ಐ ಜಿಲ್ಲಾಧ್ಯಕ್ಷ ಆರ್.ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಸಮತಾ ಸೈನಿಕ ದಳ ವಿಭಾಗದ ಉಪಾಧ್ಯಕ್ಷ ಮಲ್ಲಿಕ್ ಯಲ್ಲಕ್ಕೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ.ಕೃಷ್ಣಕುಮಾರ್ ಭವಿಷ್ಯದಲ್ಲಿ ಬೌದ್ಧ ಧಮ್ಮಾ ವಿಷಯ ಕುರಿತು ಮಾತನಾಡಿದರು. ಪ್ರವಾಸ ಮತ್ತು ಪ್ರಚಾರ ವಿಭಾಗ ಉಪಾಧ್ಯಕ್ಷ ಉಮೇಶ್ ಕುದರ್, ಸಿದ್ದರಾಜಪ್ಪ, ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಮಂಜುನಾಥ್, ಪ್ರಜಾ ಪರಿವರ್ತನೆ ವೇದಿಕೆ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ, ಮಹಿಳಾ ವಿಭಾಗದ ಉಪಾಧ್ಯಕ್ಷೆ ನಾಗಶಿಲ್ಪಾ, ಮಾತಾ ರಮಾಬಾಯಿ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಷ ಮರಿಸ್ವಾಮಿ ಮತ್ತು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net