ಯುದ್ಧ ಅಭಿವೃದ್ಧಿಗೆ ಮಾರಕ

War is fatal to development
War is fatal to development
Published on

ಮಹಾಲಿಂಗಪುರ: ಅಭಿವೃದ್ಧಿ ದೃಷ್ಟಿಯಿಂದ ಯುದ್ಧ ಎರಡು ರಾಷ್ಟ್ರಗಳಿಗೂ ಮಾರಕವಾಗಿದ್ದು, ಪಾಕಿಸ್ತಾನ ಇದನ್ನು ಅರ್ಥೈಸಿಕೊಂಡು ರಾಜಕಾರಣ ಮಾಡಬೇಕು ಎಂದು ಕಾಂಗ್ರೆಸ್ ಕಮಿಟಿ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದರು.

ಸ್ಥಳೀಯ ಜಿಎಲ್‌ಬಿಸಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಂದೆಂದಿಗೂ ಶಾಂತಿ ಬಯಸಿ ಬದುಕು ಸಾಗಿಸುವ ದೇಶ ನಮ್ಮದು. ಎಲ್ಲದಕ್ಕೂ ಯುದ್ಧ ಪರಿಹಾರವಲ್ಲ. ಏನೇ ಇದ್ದರೂ ಮಾತುಕತೆ ಮೂಲಕ ತಾರ್ಕಿಕ ಅಂತ್ಯ ಕಾಣಬೇಕು. ಇದಕ್ಕೆ ನಮ್ಮ ದೇಶದ ಪ್ರಧಾನಿಗಳು ಮಾನವೀಯ ನೆಲೆಯಲ್ಲಿ ಸಮ್ಮತಿಸಿದ್ದಾರೆ. ಇಷ್ಟಾಗಿಯೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಮತ್ತೆ ಮತ್ತೆ ಶೆಲ್ ದಾಳಿ ಮಾಡುವ ಮೂಲಕ ದೇಶದ ಭದ್ರತೆಗೆಗೆ ಸವಾಲು ಹಾಕುತ್ತಿದೆ.

ಇಷ್ಟಕ್ಕೆ ಇದು ಸೀಮಿತಗೊಳ್ಳದೆ ಹೋದರೆ 1971ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಆದೇಶದಂತೆ ಲಾಹೋರ್ ಹೊಕ್ಕು ಹೇಗೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿತೋ ಹಾಗೇ ಮತ್ತೊಮ್ಮೆ ಅವರಿಗೆ ಕೇಂದ್ರ ಸರ್ಕಾರ ಪಾಠ ಕಲಿಸಬೇಕು. ಈಗಾಗಲೆ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದರು.

ಕಾಂಗ್ರೆಸ್ ಸೇವಾದಳ ಜಿಲ್ಲಾಧ್ಯಕ್ಷ ಪ್ರಕಾಶ ಉತ್ತೂರು, ತೇರದಾಳ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀಪಾದ ಗುಂಡಾ ಮುಖಂಡರಾದ ಪ್ರಕಾಶ ಮಮದಾಪೂರ, ಆನಂದ ಹಟ್ಟಿ, ವಿಠ್ಠಲ ಹೊಸಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net