ಯುಜಿಡಿಗಳನ್ನು ದೈಹಿಕವಾಗಿ ಸ್ವಚ್ಛಗೊಳಿಸುವುದು ಕಾನೂನುಬಾಹಿರ

21 ckm 5
ಚಿಕ್ಕಮಗಳೂರು ಶಂಕರಪುರ ಚಾಮುಂಡೇಶ್ವರಿ ದೇವಸ್ಥಾನದ ಹತ್ತಿರ ಹಾಗು ಶ್ರೀಮಾರಿಯಮ್ಮ ದೇವಾಲಯ ಪೆನ್ಷನ್ ಮೊಹಲ್ಲ ಸಮೀಪ ಮ್ಯಾನ್ಯುಯಲ್ ಸ್ಕಾÈವೆಂಜರ್‌ಗಳ ಸಮೀಕ್ಷೆ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿ ತರೀಕೆರೆ ವೆಂಕಟೇಶ್ ಮಾತನಾಡಿದರು. ಸುಜಾತಾ ಶಿವಕುಮಾರ್, ಅನುಮಧುಕರ್, ಗೋಪಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಶೌಚಗುಂಡಿ ಸೇರಿದಂತೆ ಯುಜಿಡಿಗಳನ್ನು ದೈಹಿಕವಾಗಿ ಸ್ವಚ್ಛಗೊಳಿಸುವುದು ಕಾನೂನುಬಾಹಿರ. ಜೊತೆಗೆ ಇದು ಆರೋಗ್ಯಕ್ಕೂ ಸಮಸ್ಯೆ ಉಂಟುಮಾಡುತ್ತದೆ. ಸರ್ಕಾರವು ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಕೈಗೊಂಡಿದ್ದು ನಗರಸಭೆಯ ನಮ್ಮ ಶಿಬಿರದಲ್ಲಿ ನೋಂದಣಿ ಮಾಡಿಕೊಂಡು ನೋಂದಣಿಯಾದವರಿಗೆ ಪ್ರಯೋಜನ ಒದಗಿಸಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ತಿಳಿಸಿದರು.

ನಗರಸಭೆ, ನಗರಾಭಿವೃದ್ಧಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಶಂಕರಪುರ ಚಾಮುಂಡೇಶ್ವರಿ ದೇವಸ್ಥಾನದ ಹತ್ತಿರ ಹಾಗು ಶ್ರೀಮಾರಿಯಮ್ಮ ದೇವಾಲಯ ಪೆನ್ಷನ್ ಮೊಹಲ್ಲ ಸಮೀಪ ಮ್ಯಾನ್ಯುಯಲ್ ಸ್ಕಾÈವೆಂಜರ್‌ಗಳ ಸಮೀಕ್ಷೆ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ನಗರಸಭೆ ಆಯುಕ್ತ ಬಸವರಾಜ್ ಮಾತನಾಡಿ, ಯುಜಿಡಿ ಸ್ವಚ್ಛಗೊಳಿಸಲು ತಾಂತ್ರಿಕತೆ ಬಳಸಿಕೊಳ್ಳಲಾಗುತ್ತಿದೆ. ಈ ಹಿಂದೆ ಆ ಕಾರ್ಯನಿರ್ವಹಿಸುತ್ತಿದ್ದವರು ಬೇರೆ ಕೆಲಸ ಮಾಡಲು ಹಲವು ಅವಕಾಶಗಳಿವೆ. ನೀವು ಸಂಘ-ಸAಸ್ಥೆಗಳ ಮೂಲಕ ಸಾಲ ಪಡೆದು ಹೊಸ ಉದ್ಯೋಗವಕಾಶ ಹುಡುಕಿಕೊಳ್ಳಬಹುದು. ಜೊತೆಗೆ ನೀವೇ ಇನ್ನೊಬ್ಬರಿಗೆ ಕೆಲಸ ನೀಡಬಹುದು. ಇಂಥ ಸದಾವಕಾಶ ಉಪಯೋಗಿಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿ ತರೀಕೆರೆ ವೆಂಕಟೇಶ್ ಮಾತನಾಡಿ, ಯುಜಿಡಿ ಸ್ವಚ್ಛತೆಗೊಳಿಸುವ ಕೆಲಸ ಅನಿಷ್ಠ ಪದ್ಧತಿ ಎಂದು ಗೊತ್ತಿದ್ದರೂ ತಮ್ಮ ಜೀವನ ನಿರ್ವಹಣೆಗಾಗಿ ಈ ಕೆಲಸ ನಿರ್ವಹಿಸುತ್ತಿದ್ದರು. ಪೌರಾಡಳಿತ ಸಚಿವರಾಗಿದ್ದ ಬಸವರಾಜಪ್ಪ ಅವರು ಈ ಅನಿಷ್ಟ ಪದ್ದತಿಯನ್ನು ನಿಷೇಧಿಸಿದ್ದು, ಕೆಲ ಭಾಗಗಳಲ್ಲಿ ಇನ್ನೂ ಈ ಅನಿಷ್ಟ ಪದ್ದತಿ ಜಾರಿಯಲ್ಲಿದೆ. ಕೂಡಲೇ ತಾವೆಲ್ಲರೂ ಜಾಗೃತರಾಗಿ ಎಂದು ಎಚ್ಚರಿಸಿದರು

ಬಿಎಸ್‌ಪಿ ಮುಖಂಡ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಸಾವಿರಾರು ವರ್ಷಗಳಿಂದಲೂ ಮೇಲ್ವರ್ಗದವರ ಕುತಂತ್ರದಿAದ ನಾವು ಈ ಅನಿಷ್ಠ ಪದ್ಧತಿಗೆ ಒಳಗಾಗಿದ್ದೆವು. ಇನ್ನೂ ನಾವು ಈ ಅನಿಷ್ಟ ಪದ್ದತಿಗೆ ಅಂಟಿಕೊAಡೆ ಬದುಕುತ್ತಿz್ದೆÃವೆ. ಸರ್ಕಾರದ ಹೊಸ ಯೋಜನೆಗಳು ತಮ್ಮ ಮನೆ ಬಾಗಿಲಿಗೆ ಬಂದಿದ್ದು ತಾವು ಈ ಅನಿಷ್ಟ ಪದ್ದತಿಯನ್ನು ಬಿಟ್ಟು ಹೊಸ ವೃತ್ತಿ ಮಾಡಲು ಈ ಶಿಬಿರದಲ್ಲಿ ತಾವು ನೋಂದಣಿ ಮಾಡಿಕೊಳ್ಳಿ ಎಂದು ಕರೆ ನೀಡಿದರು.

ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆ ಸದಸ್ಯರಾದ ಗೋಪಿ, ಕೌಶಲ್ಯ ಅಭಿವೃದ್ಧಿ ಅಭಿವೃದ್ಧಿ ನಿಗಮದ ಅಧಿಕಾರಿ ಪ್ರಶಾಂತ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net