ಯುಜಿಡಿ ಸಮಸ್ಯೆ ಸರಿಪಡಿಸಲು ಮುಂದಾದ ಅಧಿಕಾರಿಗಳು

h2-UGD
Published on

ಹುಬ್ಬಳ್ಳಿ: ಇಲ್ಲಿಯ ಹೊಸೂರ ಪ್ರಾದೇಶಿಕ ಬಸ್ ನಿಲ್ದಾಣದ ಆವರಣದಲ್ಲಿ ಕೆಟ್ಟು ಹೋಗಿರುವ ಒಳಚರಂಡಿ (ಯುಜಿಡಿ) ವ್ಯವಸ್ಥೆ ಸರಿಪಡಿಸಲು ವಾಕರಸಾ ಸಂಸ್ಥೆ ಅಧಿಕಾರಿಗಳು ಮುಂದಾಗಿದ್ದಾರೆ.

ಕಳೆದ ಮೂರು ದಿನಗಳಿಂದ ನಿಲ್ದಾಣದ ಮುಖ್ಯ ದ್ವಾರದಲ್ಲಿನ ಒಳಚರಂಡಿ ಕೆಟ್ಟು ಕೊಳಚೆ ನೀರು ರಸ್ತೆಯ ಹರಿಯುತ್ತಿದ್ದವು. ನಿಲ್ದಾಣ ಪ್ರವೇಶಿಸುವ ಪ್ರಯಾಣಿಕರು ಒಳಚರಂಡಿ ನೀರು ತುಳಿದುಕೊಂಡೇ ಬರಬೇಕಿತ್ತು. ಈ ಕುರಿತು ವಿಜಯವಾಣಿ ಭಾನುವಾರ ವರದಿ ಪ್ರಕಟಿಸಿತ್ತು.ಇದರಿಂದ ಎಚ್ಚೆತ್ತುಕೊಂಡ ಸಂಸ್ಥೆಯ ಅಧಿಕಾರಿಗಳು ಹಾಗೂ ಇಂಜಿನಿಯರ್​ಗಳು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಬ್ಲಾಕ್ ಆಗಿರುವ ಯುಜಿಡಿ ಕೊಳವೆ ಮಾರ್ಗ ಸರಿಪಡಿಸುವ ಕೆಲಸ ಆರಂಭಿಸಿದ್ದಾರೆ. ನಿಲ್ದಾಣದಲ್ಲಿನ ದೀಪಗಳ ವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net