ಯುಗಾದಿ, ಶ್ರೀಶೈಲ ದರ್ಶನಕ್ಕೆ ಹೆಚ್ಚುವರಿ ಬಸ್ ಕಾರ್ಯಾಚರಣೆ

KKRTC bus seizure
ರಸ್ತೆ ಅಪಘಾತದಲ್ಲಿ ಮೃತಪಟ್ಟ ಮತ್ತು ಗಾಯಾಳು ಕುಟುಂಬಕ್ಕೆ ಸಕಾಲಕ್ಕೆ ಪರಿಹಾರ ನೀಡದಿದ್ದರಿಂದ ಗಂಗಾವತಿ ಕೆಕೆಆರ್‌ಟಿಸಿ ಡಿಪೋದಲ್ಲಿ ಬಸನ್ನು ಮಂಗಳವಾರ ಜಪ್ತಿ ಮಾಡಲಾಯಿತು. ಕಕ್ಷಿದಾರ ವಕೀಲರಾದ ಎಂ.ಗೋವಿಂದ, ಕವಿತಾ, ಕೋರ್ಟ್ ಸಿಬ್ಬಂದಿ ಉಸ್ಮಾನ್, ಸೈಯದ್ ಖಾದರ್, ವೆಂಕಟೇಶ ಇತರರಿದ್ದರು.
Published on

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗ-೨ರಿಂದ ಮಾ.೨೧ರಿಂದ ೩೧ರವರೆಗೆ ಯುಗಾದಿ ಹಬ್ಬ ಹಾಗೂ ೩೦ರಂದು ನಡೆಯುವ ರಥೋತ್ಸವ ಹಿನ್ನೆಲೆಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕೆ ಹೋಗುವ ಭಕ್ತರ ಅನುಕೂಲಕ್ಕಾಗಿ ವಿಶೇಷ (ಹೆಚ್ಚುವರಿ) ಬಸ್ ವ್ಯವಸ್ಥೆ ಮಾಡಲಾಗಿದೆ. ಮಾಹಿತಿಗೆ ವಿಭಾಗೀಯ ಸಂಚಾರ ಅಧಿಕಾರಿ ರವೀಂದ್ರಕುಮಾರ ಡಿಗ್ಗಿ (೭೭೬೦೯ ೮೪೦೮೬), ಕಲಬುರಗಿ ನಿಲ್ದಾಣ ಅಧಿಕಾರಿ ಮಲ್ಲಿಕಾರ್ಜುನ ಜೋಗೂರ (೯೬೮೬೯ ೭೬೪೫೧), ಅನಿಲಕುಮಾರ (೮೬೧೮೬ ೩೭೩೯೫), ಆಳಂದ ಬಸ್ ನಿಲ್ದಾಣದ ಯೋಗಿನಾಥ ಸರಸಂಬಿ (೭೭೬೦೯ ೯೨೧೧೬), ಜೇವರ್ಗಿ ನಿಲ್ದಾಣ ಜೆ.ಡಿ. ದೊಡಮನಿ (೭೭೬೦೯ ೯೨೧೧೮) ಹಾಗೂ ಅಫಜಲಪುರ ನಿಲ್ದಾಣದ ಅಮೀನಪ್ಪ ಬೋವಿ (೭೭೬೦೯ ೯೨೧೨೧) ಅವರನ್ನು ಸಂಪರ್ಕಿಸಬಹುದು. ೪೦-೪೫ ಪ್ರಯಾಣಿಕರಿದ್ದಲ್ಲಿ ನೇರವಾಗಿ ಸಾರಿಗೆ ಸೌಲಭ್ಯ ಒದಗಿಸುವುದಾಗಿ ನಿಗಮದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net