ಯುಗಾದಿ ಬೇವು ಬೆಲ್ಲ ಸವಿ

3103KLB13
Published on

ಕಲಬುರಗಿ: ರಾಮ ನವಮಿ ಉತ್ಸವ ಸಮಿತಿಯಿಂದ ೧೦ನೇ ರ‍್ಷದ ಪ್ರಭು ಶ್ರೀರಾಮನ ಭವ್ಯ ಮರ‍್ತಿ ಮೆರವಣಿಗೆ, ಯುಗಾದಿ ಹಬ್ಬ ಹಾಗೂ ಹೊಸ ರ‍್ಷದ ನಿಮಿತ್ತ ಭಾನುವಾರ ಸಂಜೆ ಸಾಮೂಹಿಕವಾಗಿ ಬೇವು ಬೆಲ್ಲ ಸವಿಯುವ ಕರ‍್ಯಕ್ರಮ ಜರುಗಿತು.

ನಗರದ ಶೆಟ್ಟಿ ಕಾಂಪ್ಲೆಕ್ಸ್​ ಬಳಿ ರಾಮ ನವಮಿ ಉತ್ಸವ ಸಮಿತಿ ಕರ‍್ಯಾಲಯ ಮುಂದೆ ರ‍್ಪಡಿಸಿದ್ದ ಕರ‍್ಯಕ್ರಮದಲ್ಲಿ ಕಡಗಂಚಿಯ ಶ್ರೀ ವೀರತಪಸ್ವಿ ಶಾಂತವೀರ ಶಿವಾಚರ‍್ಯರು ಸಾನ್ನಿಧ್ಯ ವಹಿಸಿ, ಮಾತನಾಡಿ, ಹತ್ತು ರ‍್ಷದಿಂದ ರಾಮ ನವಮಿ ಉತ್ಸವ ಸಮಿತಿಯಿಂದ ವಿಜೃಂಭಣೆಯಿಂದ ಪ್ರಭು ಶ್ರೀರಾಮನ ಭವ್ಯ ಮರ‍್ತಿಯ ಮೆರವಣಿಗೆ ನಡೆಯುತ್ತಿದೆ. ಭವ್ಯ ಶೋಭಾಯಾತ್ರೆ ಇಡೀ ರಾಜ್ಯಾದ್ಯಂತ ವೈಭವ ಹರಡಿಸಿದೆ ಎಂದರು.

ರಾಮ ನವಮಿ ಉತ್ಸವ ಸಮಿತಿ ವೈಭವ ಪರ‍್ವಕ ದಶಮಾನೋತ್ಸವ ಆಚರಿಸುತ್ತಿದ್ದು, ಈ ಬಾರಿಯೂ ಅತ್ಯಂತ ವೈಭವ ಮೆರವಣಿಗೆ ನಡೆಯಲಿದೆ. ಎಲ್ಲ ರಾಮ ಭಕ್ತರು ಭಾಗಿಯಾಗುವ ಮೂಲಕ ಶೋಭಾಯಾತ್ರೆ ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.

ಪ್ರಮುಖರಾದ ರಮೇಶ ಪಾಟೀಲ್​, ದತ್ತಾತ್ರೇಯ ಮಲಕಣ್ಣ, ಶಿವು ಕೇರಳ್ಳಿ ಹಾಗೂ ರಮೇಶ ಜೋಶಿ ಸಂಗಡಿಗರಿಂದ ಸಂಗೀತ ಸಂಜೆ ನಡೆಯಿತು. ಸಮಿತಿ ಸದಸ್ಯರಾದ ಸಚಿನ ಕಡಗಂಚಿ, ಗುರು ಸಾಗರೆ, ಸುಜೀತ ಮಿಶ್ರಾ, ಮಲ್ಲಿನಾಥ ಅವರಾದಿ, ಚಿದಾನಂದ ಹಿರೇಮಠ, ಸುದೀಪ ಚಿಂಚೋಳಿ, ಆನಂದ ಕಲೋಜಿ, ಮುರಳಿ ಯಲಮಡಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net