ಯುಗಮಾನೋತ್ಸವಕ್ಕೆ ರಂಭಾಪುರಿ, ಕೇದಾರ ಶ್ರೀ ಸಾನ್ನಿಧ್ಯ

Capture1
Published on

ಭಾಲ್ಕಿ: ಭಕ್ತರ ಬಹುದಿನಗಳ ಆಶಯದಂತೆ 23ರಂದು ಬೀದರ್ ರಂಗಮಂದಿರದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವ ರಂಭಾಪುರಿ ಮತ್ತು ಕೇದಾರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ಜರುಗಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ, ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಯುಗಮಾನೋತ್ಸವ ಪ್ರಚಾರಾರ್ಥ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾರ್ಯಕ್ರಮ ಯಶಸ್ಸಿಗೆ ರಚಿಸಿದ ವಿವಿಧ ಸಮಿತಿ ಪದಾಧಿಕಾರಿಗಳು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಯುಗಮಾನೋತ್ಸವ ಸಮಿತಿಯ ಶಿವಯ್ಯ ಸ್ವಾಮಿ ಮಾತನಾಡಿ, ಕಾರ್ಯಕ್ರಮ ಅರ್ಥಪೂರ್ಣವಾಗಿಸುವ ದಿಸೆಯಲ್ಲಿ ಅನೇಕ ಪೂರ್ವಭಾವಿ ಸಿದ್ಧತಾ ಸಭೆ ನಡೆಸಲಾಗಿದೆ. ವೇದಿಕೆ, ಮೆರವಣಿಗೆ, ಪ್ರಸಾದ ಸೇರಿ ಮಹತ್ವದ ಜವಾಬ್ದಾರಿಗಳನ್ನು ಆಯಾ ಸಮಿತಿಗಳಿಗೆ ವಹಿಸಲಾಗಿದೆ ಎಂದು ತಿಳಿಸಿದರು.

ಕರಪತ್ರ, ಭಿತ್ತಿಪತ್ರ ಸೇರಿ ವಿವಿಧ ಸಾಮಗ್ರಿಗಳ ಮೂಲಕ ಯುಗಮಾನೋತ್ಸವದ ಪ್ರಚಾರ ನಡೆಸಲಾಗುತ್ತಿದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಹಲಬರ್ಗಾ-ಶಿವಣಿ-ಹೈದರಾಬಾದ್ ಮಠದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾಜರ್ುನ ಸ್ವಾಮಿ, ವರದಯ್ಯ ಸ್ವಾಮಿ ಗಾದಗಿ, ವಿಶ್ವರಾಧ್ಯ ಶಾಸಿ, ಚಂದ್ರಶೇಖರ ವಂಕೆ, ಸಚಿನ್ ಪಾಟೀಲ್, ಶಿವಶರಣಯ್ಯ ಸ್ವಾಮಿ, ಷಡಕ್ಷರಿ ಸ್ವಾಮಿ, ಶಂಭುಲಿಂಗ ಸ್ವಾಮಿ, ಸಂತೋಷ ಸ್ವಾಮಿ, ಮನ್ಮಥ ಸ್ವಾಮಿ ಇದ್ದರು.

ನಾಗಮಾರಪಳ್ಳಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ: ಯುಗಮಾನೋತ್ಸವ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾಗಿ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಯುಗಮಾನೋತ್ಸವ ಸಮಿತಿಯ ಸಿದ್ರಾಮಯ್ಯ ಸ್ವಾಮಿ ಹಾಗೂ ಶಿವಯ್ಯ ಸ್ವಾಮಿ ತಿಳಿಸಿದ್ದಾರೆ. ಸ್ವಾಗತ ಸಮಿತಿ ಸದಸ್ಯರಾಗಿ ಶಂಕರ ಪಾಟೀಲ್ ಅತಿವಾಳ, ಶಿವಾನಂದ ವಡ್ಡೆ, ಬಸಯ್ಯ ಸ್ವಾಮಿ ಟೆಂಗಿನ, ಜಗನ್ನಾಥ ಕರಂಜೆ ಬಾಳೂರ, ಡಾ.ಬಸವರಾಜ ಮಠಪತಿ, ಡಾ.ಪ್ರಭುಲಿಂಗ ಸ್ವಾಮಿ, ಶಿವಕುಮಾರ ಸ್ವಾಮಿ ಬಂಬಳಗಿ, ರಮೇಶ ಬಿರಾದಾರ, ರವಿ ಸ್ವಾಮಿ ನಿರ್ಣಾ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net