

ಚಿಕ್ಕಮಗಳೂರು: ಅಭಿನಿತಾ ಚಾರಿಟಬಲ್ ಟ್ರಸ್ಟ್ ಹಾಗೂ ಫ್ಯಾಷನ್ ದೀವಾ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಐಕಾನ್ ಆಫ್ ಇಂಡಿಯಾ -೨೦೨೫ ರ ಫ್ಯಾಷನ್ ಶೋ - ಸ್ಪರ್ಧೆಯಲ್ಲಿ ಎನ್.ಯುಕ್ತ ಅವರು "ಕಿಡ್ಸ್ ಕರ್ನಾಟಕ ವಿಜೇತರಾಗಿ ಪ್ರಶಸ್ತಿ ಪಡೆದಿದ್ದಾರೆ.
ನಗರದ ಸೆಂಟ್ ಜೋಸೆಫ್ ಇಂಗ್ಲಿಷ್ ಹೈಯರ್ ಪ್ರೈಮರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಯುಕ್ತ ಅವರು ನಂದಿನಿ ಹಾಗೂ ನವೀನ್ ದಂಪತಿ ಪುತ್ರಿ.