ಯು.ಬಿ.ಬಣಕಾರ ದ್ರೋಹ ಮಾಡಿದ್ದಾರೆ; ಬಿ.ಸಿ.ಪಾಟೀಲ ಗೆಲುವು ಖಚಿತ ಬಿಎಸ್‌ವೈ

IMG_20230507_114136
Published on

ರಟ್ಟಿಹಳ್ಳಿ: ಪಟ್ಟಣದಲ್ಲಿ ಸಚಿವ ಬಿ.ಸಿ.ಪಾಟೀಲ ಪರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಭರ್ಜರಿ ಮತಯಾಚನೆ ನಡೆಸಿದರು.

ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲರ ಪರವಾಗಿ ರಟ್ಟಿಹಳ್ಳಿಯಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಬಿಎಸ್ ವೈ ಮಾತನಾಡಿ, ಬಿ.ಸಿ. ಪಾಟೀಲರು 25, 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವುದು ನಿಶ್ಚಿತ.

ಇದನ್ನ ಯಾರೂ ಸಹ ತಡೆಯಲು ಸಾಧ್ಯವಿಲ್ಲ. ಕೃಷಿ ಸಚಿವರಾಗಿ ಬಿಸಿ ಪಾಟೀಲ ಒಳ್ಳೆಯ ಕೆಲಸ ಮಾಡಿದ್ದಾರೆ.

ಯುಬಿ ಬಣಕಾರ ನಮಗೆ ದ್ರೋಹ ಮಾಡಿ ಹೋದ ವ್ಯಕ್ತಿ. ಎಲ್ಲ ಸ್ಥಾನಮಾನ ಕೊಟ್ಟರೂ ದ್ರೋಹ ಮಾಡಿ ಬಣಕಾರ ಹೋಗಿದ್ದಾರೆ.

ಮಾಜಿ ಶಿಷ್ಯ ಯು.ಬಿ. ಬಣಕಾರ ವಿರುದ್ದ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net