

ಚಿತ್ರದುರ್ಗ: ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯಲ್ಲಿ ಶಿಕ್ಷಕರು,ಪಾಲಕರು,ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಪಾತ್ರ ಮುಖ್ಯವಾ ಗಿದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಡಯಟ್ ನಲ್ಲಿ ಬುಧವಾರ ಆಯೋಜಿಸಿದ್ದ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ‌್ಯ ಕ್ರಮದಲ್ಲಿ ಮಾತನಾಡಿದ ಅವರು,ನಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಬಾಲ ಕಾರ್ಮಿಕರು ಕಂಡು ಬಂದರೆ ಅಂತವರ ಪಾಲಕರಿಗೆ ತಿಳಿವಳಿಕೆ ನೀಡಬೇಕು. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ಶೈಕ್ಷಣಿಕ ಭಾಗೀದಾರರು ಕಾರ್ಯ ನಿರ್ವಹಿಸಬೇಕೆಂದರು.
ಉಪನ್ಯಾಸಕ ಎಸ್.ಬಸವರಾಜು ಪ್ರತಿಜ್ಞಾ ವಿಧಿ ಬೋಧಿಸಿದರು. ಹಿರಿಯ ಉಪನ್ಯಾಸಕರಾದ ಎಸ್.ಜ್ಞಾನೇಶ್ವರ, ಪೂರ್ಣಿಮಾ,ಗಿರಿಜಾ,ಮಂಜು ಳಾ, ಉಪನ್ಯಾಸಕರಾದ ಆರ್.ನಾಗರಾಜು,ಕೆ.ಜಿ.ಪ್ರಶಾಂತ್,ಸಿ.ಎಸ್.ಲೀಲಾವತಿ,ಕನಕಮ್ಮ, ಶಿವಲೀಲಾ, ಬಿ.ಎಸ್.ನಿತ್ಯಾನಂದ,ಬಿಆರ್‌ಸಿ ಸುರೇಂ ದ್ರನಾಥ್,ತಾಂತ್ರಿಕ ಸಹಾಯಕ ಲೋಕೇಶ್,ಸಿಬ್ಬಂದಿ ಕವಿತಾ,ರೂಪಾ,ಮಂಜುನಾಥ್ ಸೌಭಾಗ್ಯಮ್ಮ, ಕ್ಷೀರಾ,ಶ್ರೀನಿವಾಸ್ ಮತ್ತಿತರರಿದ್ದರು.