ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ:ಸಂಗಣ್ಣ ಕರಡಿ

SANGANNA KARADI
Published on

ಕೊಪ್ಪಳ:ರಕ್ತದಲ್ಲಿ ಬೇಕಾದರೂ ಬರೆದು ಕೊಡುವೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲವೆಂದು ಸಂಸದ ಸಂಗಣ್ಣ ಕರಡಿ ಹೇಳಿದರು.


ನಗರದಲ್ಲಿ ಸೋಮವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.

ಸದ್ಯ ನಾನು ಸಂಸದನಿದ್ದೇನೆ. ಮುಂದೆಯೂ ಲೋಕಸಭೆಗೆ ಸ್ಪರ್ಧೆ ಮಾಡುವೆ. ಪಕ್ಷ ನನೆಗೆ ಟಿಕೆಟ್ ನೀಡುವ ವಿಶ್ವಾಸವಿದೆ. ನೀಡದಿದ್ದರೂ ಪಕ್ಷಕ್ಕಾಗಿ ಕೆಲಸ ಮಾಡುವೆ. ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವೆ. ಆದರೆ, ಬಿಜೆಪಿ ಬಿಡುವುದಿಲ್ಲ. ಇನ್ನೊಮ್ಮೆ ನಾನು ಪಕ್ಷ ಬಿಡುವ ಬಗ್ಗೆ ಪ್ರಶ್ನೆಯನ್ನೇ ಕೇಳಬೇಡಿ ಎಂದು ಖಡಕ್ ಆಗಿ ನುಡಿದರು.


ಕುಷ್ಟಗಿ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಪಕ್ಷ ಬಿಡುವ ವದಂತಿಗೆ ಪ್ರತಿಕ್ರಿಯಿಸಿ, ದೊಡ್ಡನಗೌಡರೂ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ನಮ್ಮ ಪಕ್ಷ ಸಂಘಟನೆಯಲ್ಲಿ ಒಂದಿಷ್ಟು ಹಿನ್ನಡೆಯಾಗಿದೆ ನಿಜ. ಇಷ್ಟರಲ್ಲಿಯೇ ಮತ್ತೆ ಸಂಘಟನೆ ಬಲಗೊಳ್ಳಲಿದೆ. ವಿಪಕ್ಷ ನಾಯಕನ ಆಯ್ಕೆಯಾಗಲಿದೆ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ದೇಶದ ಒಂದು ಸಾವಿರ ಅಂಚೆ ಕಚೇರಿಗಳಲ್ಲಿ ರಫ್ತು ಸೇವಾ ಕೇಂದ್ರ ಆರಂಭಿಸಲಾಗಿದೆ. ನನ್ನ ಕ್ಷೇತ್ರದ ಕೊಪ್ಪಳ, ಸಿಂಧನೂರಿನಲ್ಲಿ ಕೇಂದ್ರ ಆರಂಭವಾಗಿವೆ. ಕೇಂದ್ರ ಸರ್ಕಾರ ಈಗಾಗಲೇ ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹ ನೀಡುತ್ತಿದೆ. ರಫ್ತು ಕೇಂದ್ರ ಆರಂಭದಿಂದ ತೋಟಗಾರಿಕೆ ಹಾಗೂ ಸಿರಿಧಾನ್ಯ ಬೆಳೆಗೆ ಅನುಕೂಲವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net