ಯಾವ ಶಾಸಕರು ನನ್ನ ಸಂಪರ್ಕದಲ್ಲಿಲ್ಲ

20230904_123023 copy
Published on

ಯಾದಗಿರಿ: ಬಿಜೆಪಿಯ ಯಾವ ಶಾಸಕರು ಮತ್ತು ಮುಖಂಡರು ಕಾಂಗ್ರೆಸ್ ಸೇರಲು ನಮ್ಮ ಸಂಪರ್ಕದಲ್ಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಸ್ಪಷ್ಟಪಡಿಸಿದರು.
ಕಾಂಗ್ರೆಸ್ಗೆ ಆಪರೇಷನ್ ಕಮಲ ಮಾಡುವ ಅಗತ್ಯವೇ ಇಲ್ಲ. ಹೀಗಾಗಿ ಜಿಲ್ಲೆಯ ಜೆಡಿಎಸ್ನ ಶಾಸಕ ಶರಣಗೌಡ ಕಂದಕೂರ, ಮಾಜಿ ಶಾಸಕ ನರಸಿಂಹ ನಾಯಕ (ರಾಜುಗೌಡ) ನನ್ನ ಜತೆ ಚಚರ್ೆ ಮಾಡಿಲ್ಲ. ಆದರೆ, ಸಾಮಾನ್ಯವಾಗಿ ನಾವು ಸಭೆ, ಸಮಾರಂಭಗಳಲ್ಲಿ ಮಾತನಾಡುತ್ತೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿದ್ದ್ಧರಾಮಯ್ಯ ಅವರು ಲಾಟರಿ ಸಿಎಂ ಎಂಬ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ದರ್ಶನಾಪುರ, ಬಿಜೆಪಿಯಂತೆ ನಮ್ಮದು ಬಹುಮತವಿಲ್ಲದೆ ಬಂದ ಸಕರ್ಾರವಲ್ಲ. 2013ರಲ್ಲಿ ಹಾಗೂ ಈಗ ರಾಜ್ಯದ ಜನತೆ ಕಾಂಗ್ರೆಸ್ಗೆ ಸ್ಪಷ್ಟವಾಗಿ ಬಹುಮತ ನೀಡಿದ್ದಾರೆ. ಆದರೆ, ಬಿಜೆಪಿಗೆ ಎಂದಾದರೂ ಕೊಟ್ಟಿದ್ದರೇ. ಸಿದ್ದ್ಧರಾಮಯ್ಯ ಜನಪ್ರಿಯತೆ ಎಷ್ಟಿದೆ ಎಂಬ ಬಗ್ಗೆ ದಾವಣೆಗೆರೆಯಲ್ಲಿ ನಡೆದ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಸೇರಿದ್ದ ಜನಸಾಗರವೇ ಸಾಕ್ಷಿಯಾಗಿದೆ. ಅದೇ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಾಗ ಜನ ಯಾಕೆ ಬರಲಿಲ್ಲ. ಈಶ್ವರಪ್ಪ ಹಿರಿಯ ರಾಜಕಾರಣಿಯಾಗಿ ಇಂಥ ಹೇಳಿಕೆ ನೀಡಬಾರದು ಎಂದು ಟಾಂಗ್ ನೀಡಿದರು.

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಕೊಂಚ ಹೆಚ್ಚಾದ ಪರಿಣಾಮ ಲೋಡ್ ಶೆಡ್ಡಿಂಗ್ ಆಗುತ್ತಿದ್ದು ಕೆಲವೇ ದಿನಗಳಲ್ಲಿ ಇದಕ್ಕೆ ಪರಿಹಾರ ಒದಗಿಸಲಾಗುವುದು. ವಿಜಯಪುರ-ಹೈದರಾಬಾದ್ ರಾಜ್ಯ ಹೆದ್ದಾರಿ ದುರಸ್ಥಿಗೆ ಈ ಹಿಂದೆ ಚಚರ್ೆ ನಡೆಸಲಾಗಿತ್ತು. ಮತ್ತೊಮ್ಮೆ ಸಂಬಂಸಿದ ಅಕಾರಿಗಳೊಡನೆ ವರದಿ ತರಿಸಿಕೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net