ಯಾಳವಾರ ಪಿಡಿಒಗೆ ರಕ್ಷಣೆ ನೀಡಿ

1812Klb02
Published on

ಕಲಬುರಗಿ: ಜೇವರ್ಗಿ ತಾಲೂಕಿನ ಯಾಳವಾರ ಗ್ರಾಪಂನಲ್ಲಿ ಹಿಂದಿನ ಅಧ್ಯಕ್ಷೆ ಮತ್ತು ಅವರ ಸಹಚರರು ಭ್ರಷ್ಟಾಚಾರ ಮಾಡಿದ್ದು, ಅದಕ್ಕೆ ಪಿಡಿಒ ಮತ್ತು ನೂತನ ಅಧ್ಯಕ್ಷೆಯನ್ನು ಹೊಣೆ ಮಾಡಲಾಗುತ್ತಿದೆ. ಕೂಡಲೇ ಇದಕ್ಕೆ ತಡೆ ಒಡ್ಡಬೇಕು. ಪಿಡಿಒ ಅವರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ದಲಿತ ಸೇನೆ ಸೋಮವಾರ ಪ್ರತಿಭಟನೆ ನಡೆಸಿತು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದ ಸೇನೆ ಪದಾಧಿಕಾರಿಗಳು, ಹಿಂದೆ ಭ್ರಷ್ಟಾಚಾರ ನಡೆಸಿದ ಹಿಂದಿನ ಅಧ್ಯಕ್ಷೆ ಶಾಂತಮ್ಮ ಕೊಳ್ಳಿ ಅವರ ಭ್ರಷ್ಟಾಚಾರ ಆರೋಪ ಸಾಬೀತಾಗಿ, ಹಣ ವಸೂಲಿಗೆ ಜಿಪಂ ಸಿಇಒ ಆದೇಶಿಸಿದ್ದರು. ಇದೀಗ ಅವರ ಪುತ್ರನು ವಿನಾಕಾರಣ ಪ್ರಸ್ತುತ ಪಿಡಿಒ ವಿರುದ್ಧ ದೂರು ನೀಡಿ, ಕಿರುಕುಳ ನೀಡುತ್ತಿದ್ದಾನೆ. ಕೂಡಲೇ ಸಿಇಒ ಆದೇಶದಂತೆ ಹಣ ವಸೂಲಿ ಮಾಡಿ, ಅಭಿವೃದ್ಧಿ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು. ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ನೀಡಿದರು. ಸೇನೆ ಅಧ್ಯಕ್ಷ ಹಣಮಂತ ಯಳಸಂಗಿ, ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net