ಯಾರಿಗೂ ತಾರತಮ್ಯ ಮಾಡಿಲ್ಲ

Chandrappa
Published on

ಚಿತ್ರದುರ್ಗ: ಚುನಾವಣೆ ವೇಳೆ ನನಗೆ ಮತ ಹಾಕಿದ, ಹಾಕದ ಸೇರಿ ಎಲ್ಲ ಜಾತಿ-ಧರ್ಮದವರನ್ನು ಸಮನಾಗಿ ಕಂಡಿದ್ದೇನೆ. ಯಾರಿಗೂ ತಾರತಮ್ಯ ಮಾಡಿಲ್ಲ ಎಂದು ಹೊಳಲ್ಕೆರೆ ಶಾಸಕ ಡಾ.ಎಂ. ಚಂದ್ರಪ್ಪ ಹೇಳಿದರು.

ಬಕ್ರೀದ್ ಹಬ್ಬದ ಅಂಗವಾಗಿ ಹೊಳಲ್ಕೆರೆ ಪಟ್ಟಣದ ಈದ್ಗಾ ಮೈದಾನದಲ್ಲಿ ಶನಿವಾರ ಮುಸ್ಲಿಂ ಸಮುದಾಯದವರೊಟ್ಟಿಗೆ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಎಲ್ಲರೊಟ್ಟಿಗೆ ಸಹಬಾಳ್ವೆ, ಸಹೋದರತ್ವ ಇರಬೇಕು. ಜಾತಿ, ಧರ್ಮಕ್ಕಿಂತಲೂ ಮಾನವೀಯತೆ ದೊಡ್ಡದು. ಭಗವದ್ಗೀತೆ, ಕುರಾನ್, ಬೈಬಲ್ ಎಲ್ಲದರ ಸಾರ ಶಾಂತಿ. ಆದ್ದರಿಂದ ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net