ಯಾದವಿ ಕಲಹ ಬೇಡ

Shanthaveera
Published on

ಚಿತ್ರದುರ್ಗ: ಯಾದವರಲ್ಲಿ ಯಾದವೀ ಕಲಹ ಬೇಡ. ಕಾಡು, ಊರು ಗೊಲ್ಲರೆಂಬ ಗೊಂದಲದಿಂದಲೇ ಸಮಾಜ ಅಸಂಘಟಿತ ಆಗಬಾರದು ಎಂದು ಕುಂಟಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಸಲಹೆ ನೀಡಿದರು.

ಯಾದವ ಮಠದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಅವರ ಗುರುವಂದನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಈಗಾಗಲೇ ಕೇಂದ್ರಕ್ಕೆ ಶಿಫಾರಸ್ಸು ಆಗಿರುವ ಮೀಸಲಾತಿ ಪಡೆಯಲು ಎಲ್ಲರೂ ಒಗ್ಗಟ್ಟಾಗಿ ಪ್ರಯತ್ನಿಸಬೇಕು ಎಂದರು.

ಇಡೀ ದೇಶದಲ್ಲಿ ಅಂದಾಜು 15 ಕೋಟಿ ಜನಸಂಖ್ಯೆ ಇರುವ ಏಕೈಕ ಸಮಾಜ ಯಾದವ. 3-4 ರಾಜ್ಯಗಳಲ್ಲಿ ಮುಖ್ಯಮಂತ್ರಿ ಆಗುವ ಅವಕಾಶ ಸಮುದಾಯಕ್ಕೆ ಇದೆ. ಸಂಘಟನೆ ಮೂಲಕ ರಾಜಕೀಯ ಅಸ್ಥಿತ್ವ ಪಡೆದುಕೊಳ್ಳಲು ಸಾಧ್ಯವೆಂಬ ಅರಿವು ಬೆಳೆಸಿಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net