

ಯಾದಗಿರಿ: ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ೫ನೇ ರಾಜ್ಯ ಸಮ್ಮೇಳನ ಗಿರಿಜಿಲ್ಲೆ ಕೇಂದ್ರ ಸ್ಥಾನ ಯಾದಗಿರಿಯಲ್ಲಿ ಬರುವ ಡಿ.೨೯ ಮತ್ತು ೩೦ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದು, ಈ ಸಮ್ಮೇಳನ ಯಶಸ್ಸಿಗೆ ಸಹಕರಿಸುವಂತೆ ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷ ಹುಲಕಲ್ ನಟರಾಜ ಮನವಿ ಮಾಡಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಕರೆದಿದ್ದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಉz್ದೆÃಶವೇ ಮೌಢ್ಯವನ್ನು ತೊಡೆದುಹಾಕುವುದು. ಮೌಢ್ಯ ಎಂದರೆ ಅಸತ್ಯ, ಸುಳ್ಳು ಆಗಿದ್ದು, ಅದರ ಬಣ್ಣ ಬಯಲು ಮಾಡುವುದೇ ಇದರ ಮೂಲ ಉz್ದÉÃಶ ಎಂದರು.
ವಿಶೇಷವಾಗಿ ಯಾದಗಿರಿ ಜಿಲ್ಲೆಯಲ್ಲಿ ಭಾನಾಮತಿ ಸೇರಿ ಇನ್ನಿತರ ಮೌಢ್ಯಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಮತ್ತು ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಸಮ್ಮೇಳನಕ್ಕೆ ಈ ಜಿಲ್ಲೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲೆಗೆ ಸಿಕ್ಕಿರುವ ಸಮ್ಮೇಳನವನ್ನು ಅಚ್ಚುಕಟ್ಟಾಗಿ ರೂಪಿಸುವಲ್ಲಿ ಸಲಹೆ, ಸೂಚನೆ, ಅನಿಸಿಕೆಗಳು ಅಲ್ಲದೆ ಎಲ್ಲ ರೀತಿಯ ಸಹಯೋಗ ನೀಡಿ ಮಾದರಿ ಸಮ್ಮೇಳನ ಮಾಡಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಗುರುಮಠಕಲ್ ಖಾಸಾ ಮಠದ ಗುರುಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಈ ವೇಳೆ ಹುಲಕಲ್ ನಟರಾಜ್ ಅವರಿಗೆ ಜಿಲ್ಲಾ ಸಮಿತಿಯಿಂದ ಸನ್ಮಾನಿಸಲಾಯಿತು. ಶರಣು ನಾಟೀಕರ್ ಕ್ರಾಂತಿಗೀತೆ ಹಾಡಿದರು. ನಾಗರತ್ನ ಯಕ್ಷಿಂತಿ ಸಂವಿಧಾನ ಪೀಠಿಕೆ ಬೋಧಿಸಿದರು. ಜಗದೀಶ್ ನುಲಿನವರ್ ನಿರೂಪಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು: ಬೀದರ್‌ನ ಬೌದ್ಧ ಬಿಕ್ಕು ಧಮ್ಮ ನಾಗ ಭಾಂತೇಜಿ, ನಗರದ ಮೌಲಾನಾ ಹಫೀಜ್, ಡಾನ್ ಬಾಸ್ಕೊದ ಫಾದರ್ ವಿವೇಕ, ಓಂಕಾರ್ ನಾಯಕ, ಹಾಸನದ ಕಮಲ್ ಕುಮಾರ್, ಚನ್ನಾರೆಡ್ಡಿ ಬಿಳ್ಹಾರ, ಶ್ರವಣ ಕುಮಾರ, ಚನ್ನಪ್ಪಗೌಡ ಮೋಸಂಬಿ, ಪತ್ರಕರ್ತ ವಿಶ್ವಾರಾಧ್ಯ ಸತ್ಯಂಪೇಟ, ಮಹಾಸಭಾ ಮಾಜಿ ಅದ್ಯಕ್ಷ ಸೋಮಶೇಖರ ಮಣ್ಣೂರು, ಬಸವರಾಜ ಜೈನ್, ನಾಗರತ್ನ ಕುಪ್ಪಿ, ಮಹೇಶ್ ರೆಡ್ಡಿ ಮುದ್ನಾಳ್, ಡಾ.ಭೀಮಣ್ಣ ಮೇಟಿ, ಸಿಎಂ ಪಟ್ಟೇದಾರ, ಅಜೀಜ್ ಶೇಹನಾ, ಮಹೇಶ ಆನೆಗುಂದಿ, ಸೋಮನಾಥ್ ಜೈನ್, ಚೆನ್ನಪ್ಪ ಆನೆಗುಂದಿ, ಭೀಮರಾಯ ಠಾಣಗುಂದಿ, ವೆಂಕಪ್ಪ ಅಲೆಮನಿ, ವಿಶ್ವನಾಥ್ ಸಿರವಾರ, ಬಂಡಪ್ಪಾ ಅಕಳ, ಬೀದರ್‌ನ ಬಾಬುರಾವ ದಾನಿ ಇತರರಿದ್ದರು.
ಸಮ್ಮೇಳನದ ಲಾಭ ಪಡೆದುಕೊಳ್ಳಿ: ಸಮ್ಮೇಳನಕ್ಕೆ ರಾಜ್ಯ ಸರ್ಕಾರದ ವಿಜ್ಞಾನ ಅಕಾಡೆಮಿ, ಇಸ್ರೋ, ಬಿಇಎಲ್, ಬಿಎಚ್‌ಇಎಲ್ ಸೇರಿ ಅನೇಕ ವಿಜ್ಞಾನ-ತಂತ್ರಜ್ಞಾನ ಇಲಾಖೆ ಸಹಯೋಗ ಸಿಗಲಿದೆ. ವೈಜ್ಞಾನಿಕ ಚಿಂತನೆ ಮನೋಭಾವದ ಮಾನವ ಬಂಧುತ್ವ ವೇದಿಕೆಯ ರೂವಾರಿಗಳೂ, ಸಚಿವರೂ ಆದ ಸತೀಶ ಜಾರಕಿಹೊಳಿ ಅವರು ಯಾದಗಿರಿಯನ್ನು ಆಯ್ಕೆ ಮಾಡಲು ಸಲಹೆ ನೀಡಿದ ಹಿನ್ನೆಲೆಯಲ್ಲಿ ಸಮ್ಮೇಳನ ಇಲ್ಲಿ ನಿಗದಿಯಾಗಿದೆ. ಖಗೋಳ ಶಾಸ್ತç ಸೇರಿ ವಿವಿಧ ವಿಜ್ಞಾನಗಳ ನೇರ ಪರಿಚಯ ಮಾಡಿಕೊಡುವ ಬಸ್ ಮತ್ತು ವಾಹನಗಳು ಜಿಲ್ಲೆಗೆ ಬರಲಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಇದರ ಲಾಭ ಪಡೆದುಕೊಳ್ಳಬೇಕು ಎಂದು ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷ ಹುಲಕಲ್ ನಟರಾಜ ಹೇಳಿದರು.