ಯಾದಗಿರಿಯಲ್ಲಿ ಮಾದಿಗರ ಬೃಹತ್ ಪ್ರತಿಭಟನೆ ಆ.೧ರಂದು

27 ydg 07
Published on

ಯಾದಗಿರಿ: ಒಳ ಮೀಸಲಾತಿ ಜಾರಿಗೆ ಕಾಂಗ್ರೆಸ್ ಸರ್ಕಾರ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಆ.೧ರಂದು ಯಾದಗಿರಿ ನಗರದಲ್ಲಿ ಜಿಲ್ಲಾ ಮಾದಿಗ ಸಮಾಜದಿಂದ ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಲೆಮಾರಿ, ಅರೆಅಲೆಮಾರಿ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ದೇವೇಂದ್ರನಾಥ ನಾದ್ ತಿಳಿಸಿದರು.

ತಾಲೂಕಿನ ಸೈದಾಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಸಮಾಜದ ಮುಖಂಡರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ೩೦ ವರ್ಷಗಳÀ ಹೋರಾಟದ ಫಲವಾಗಿ ಸುಪ್ರೀಂಕೊರ್ಟ್ ಒಳಮೀಸಲಾತಿ ಜಾರಿ ಮಾಡುವಂತೆ ಆದೇಶಿಸಿ ಹಲವು ತಿಂಗಳುಗಳು ಕಳೆದಿವೆ. ಆದರೆ, ಜಾರಿ ಮಾಡಬೇಕಾದ ಸಿಎಂ ಸಿದ್ದರಾಮಯ್ಯನವರು ಯಾರೋದೋ ಒತ್ತಡಕ್ಕೆ ಮಣಿದು ಅದು-ಇದು ಎಂದು ನೆಪ ಹೇಳಿ ಕಾಲ ಹರಣ ಮಾಡುತ್ತ ಮಾದಿಗ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬೇರೆ ರಾಜ್ಯಗಳಲ್ಲಿನ ಸರ್ಕಾರಗಳು ಈಗಾಗಲೇ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಿ ನ್ಯಾಯಾಂಗ ವ್ಯವಸ್ಥೆ ಗೌರವ ನೀಡಿ, ಅಲ್ಲಿನ ಮಾದಿಗ ಸಮಾಜದವರಿಗೆ ನ್ಯಾಯ ಒದಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಮೊದಲ ಅಧಿವೇಶನದಲ್ಲಿಯೇ ಜಾರಿ ಮಾಡುವುದಾಗಿ ಹೇಳಿ, ದಲಿತರಲ್ಲಿಯೇ ಜಗಳ ಹಚ್ಚುವ ಕೆಲಸಕ್ಕೆ ಮಾಡಿ ಅನ್ಯಾಯ ಮಾಡುತ್ತಿದೆ ಆರೋಪಿಸಿದರು.

ಸರ್ಕಾರ ಮಾತು ಕೇಳಿ ಇಷ್ಟು ದಿನ ಸುಮ್ಮನಿz್ದೆÃವು. ಸಮಾಜದ ತಾಳ್ಮೆ ಕಟ್ಟೆ ಒಡೆದಿದೆ. ಇನ್ನೂ ಯಾವ ಕಾರಣಕ್ಕೂ ಈ ಸರ್ಕಾರದ ಮಾತು ನಂಬುವುದಿಲ್ಲ. ಹೋರಾಟವೊಂದೇ ಉಳಿದರುವ ಮಾರ್ಗ. ಹೀಗಾಘಿ ಆ.೧ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದವರು ಭಾಗವಹಿಸಬೇಕೆಂದು ನಾದ್ ಮನವಿ ಮಾಡಿದರು.

ಸಭೆಯಲ್ಲಿ ನ್ಯಾಯವಾದಿಗಳಾದ ಚನ್ನಯ್ಯ ಮ್ಯಾಳಿಕೇರಿ, ನಿಂಗಪ್ಪ ವಡ್ನಳ್ಳಿ, ಆಂಜನೇಯ ಬಬಲಾದಿ, ಚಂದ್ರಶೇಖರ ಕಡೆಸೂರ, ಸಂಜೀವಪ್ಪ ರಾಜು, ಕೊಡ್ಲೂರ್ ಭೀಮಾಸೆಪ್ಟ್, ನರಸಪ್ಪ ನೀಲಳ್ಳಿ, ಮಲ್ಲಿಕಾರ್ಜುನ ಕೊಡ್ಲೂರ್, ಸಾಗರ, ಮೌನೇಶ, ಸಹದೇವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net