ಯಾತ್ರೆ ಮೇಲೆ ಕಲ್ಲು ತೂರಿದವರಿಗೆ ಶಿಕ್ಷೆಯಾಗಲಿ: ವಿಶ್ವ ಹಿಂದು ಪರಿಷತ್​, ಬಜರಂಗದಳದಿಂದ ಡಿಸಿ ಮೂಲಕ ರಾಷ್ಟ್ರಪತಿಗೆ ಮನವಿ

3RAVIG11
ವಿಶ್ವ ಹಿಂದು ಪರಿಷತ್​ ಹಾಗೂ ಬಜರಂಗ ದಳದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಿದರು. ಕೃಷ್ಣ ಭಟ್​, ವೀಣಾ ಗಸ್ತಿ, ಆನಂದ ಕರಲಿಂಗಣ್ಣವರ, ಉಮೇಶ ಚಿಂಡಕ, ಗಣೇಶ ಚೌಗುಲೆ, ಸಂತೋಷ ಮಾದಿಗರ, ಸುನಿಲ್​ ಗೌರಣ್ಣ, ಆದಿನಾಥ ಗಾವಡೆ, ಗೋವಿಂದರಾವ್​ ಕಿರ್ಮಿಟ್ಟೆ, ನಾಗಪ್ಪ ತುಬಾಕಿ ಇದ್ದರು.
Published on

ಬೆಳಗಾವಿ: ಹಿಂದುಗಳ ಶ್ರದ್ಧಾ ಕೇಂದ್ರವಾಗಿದ್ದ ಪಾಂಡವರ ಕಾಲದ ನಲ್ಲಡ ಶಿವಮಂದಿರ ಧಾರ್ಮಿಕ ಯಾತ್ರೆ ಮೇಲೆ ಕಲ್ಲು ತೂರಾಟ ನಡೆಸಿದವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ವಿಶ್ವ ಹಿಂದು ಪರಿಷತ್​ ಹಾಗೂ ಬಜರಂಗ ದಳದ ಪದಾಧಿಕಾರಿಗಳು ಪ್ರತಿಭಟಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ರವಾನಿಸಿದರು.

ಪ್ರತಿವರ್ಷ ಬಜರಂಗದಳದ ವತಿಯಿಂದ ಹರಿಯಾಣಾದ ಮೆವಾತನ ಯಾನುಹನಲ್ಲಿ ಧಾರ್ಮಿಕ ಬ್ರಜಮಂಡಲ ಯಾತ್ರೆ ಆಚರಿಸಲಾಗುತ್ತದೆ. ಈ ಯಾತ್ರೆ ಮೇಲೆ ಕಲ್ಲು ತೂರಾಟ, ಹಿಂಸೆ ಮತ್ತು ಬೆಂಕಿ ಹಚ್ಚುವ ಕಾರ್ಯ ನಡೆದಿದೆ. ಅಲ್ಲದೆ ಸುತ್ತಲಿನ ಪರ್ವತದಿಂದ ಗುಂಡಿನ ಸುರಿಮಳೆಗೈದಿದ್ದು, ಇದರಿಂದ ಅನೇಕ ಅಭಾಲವೃದ್ಧರಾದಾಯಾಗಿ ಹಲವರು ಗಾಯಗೊಂಡಿದ್ದಾರೆ. ನೂರಾರು ವಾಹನಗಳು ಬೆಂಕಿಗೆ ಆಹುತಿಯಾಗಿದ್ದು, ಇಬ್ಬರು ಗೃಹರಕರು ವೀರಮರಣ ಹೊಂದಿರುತ್ತಾರೆ. ಬಜರಂಗದಳ ಕಾರ್ಯಕರ್ತರು ಮತ್ತು ಅನೇಕ ತೀರ್ಥ ಯಾತ್ರಿಕರು ಗಾಯಗೊಂಡಿದ್ದಾರೆ. ನಿರಂತರವಾಗಿ ಹಿಂದು ಸಮಾಜದ ಮೇಲೆ ಅಟ್ಟಹಾಸಗೈಯುತ್ತಿರುವ ಜಿಹಾದಿ ಆತಂಕವಾದದ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಅವರಿಗೆ ಕಠಿಣ ಶಿೆ ನೀಡಬೇಕು ಎಂದು ಮನವಿ ಸಲ್ಲಿಸಿದರು.

ವಿಶ್ವ ಹಿಂದು ಪರಿಷತ್​ ಪ್ರಾಂತ ಕೋಶಾಧ್ಯಕ್ಷ ಕೃಷ್ಣ ಭಟ್​ ಮಾತನಾಡಿ, ಸರ್ಕಾರ ಉಗ್ರರನ್ನು ಬುಡ ಸಮೇತ ಕಿತ್ತಾಹಾಕಬೇಕು, ನರೇಂದ್ರ ಮೋದಿ ಅವರು ಜಗತ್ತಿನಲ್ಲಿ ಆತಂಕವಾದ ದೂರು ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ಕ್ರಮ ಜರುಗಿಸಬೇಕೆಂದು ಅವರು ಮನವಿ ಮಾಡಿದರು.
ವೀಣಾ ಗಸ್ತಿ, ಆನಂದ ಕರಲಿಂಗಣ್ಣವರ, ಉಮೇಶ ಚಿಂಡಕ, ಗಣೇಶ ಚೌಗುಲೆ, ಸಂತೋಷ ಮಾದಿಗರ, ಸುನೀಲ ಗೌರಣ್ಣ, ಆದಿನಾಥ ಗಾವಡೆ, ಗೋವಿಂದರಾವ್​ ಕಿರ್ಮಿಟ್ಟೆ, ನಾಗಪ್ಪ ತುಬಾಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net