ಯಾಜ್ಞವಲ್ಕ್ಯ ಬ್ರಹ್ಮರ್ಷಿ ಸಮ್ಮೇಳನ 28ರಿಂದ

15SND-02
Published on

ಸಿಂಧನೂರು: ಹುಬ್ಬಳ್ಳಿಯ ಗೋಕುಲ್ ಗಾರ್ಡನ್‌ನಲ್ಲಿ ಡಿ.28 ಹಾಗೂ 29ರಂದು ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಬ್ರಹ್ಮರ್ಷಿ ಅನುಯಾಯಿಗಳ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಸತ್ಯನಾರಾಯಣ ಮರಾಟಗೇರಿ ಹೇಳಿದರು. ನಗರದ ಶ್ರೀರಾಮ ಮಂದಿರದಲ್ಲಿ ಇತ್ತೀಚೆಗೆ ರಾಜ್ಯ ಸಮ್ಮೇಳನದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಡಿ.28 ರಂದು ಸಹಸ್ರ ಮೋದಕ ಗಣಪತಿ ಹೋಮ ಜರುಗಲಿದೆ. ಸಮ್ಮೇಳನವನ್ನು ಹುಣಸಿಹೊಳೆ ಕಣ್ವಮಠದ ಪೀಠಾಧಿಪತಿ ವಿದ್ಯಾ ಕಣ್ವ ವಿರಾಜತೀರ್ಥರು ಉದ್ಘಾಟಿಸುವರು. ಸ್ಮರಣ ಸಂಚಿಕೆ, ಭಜನಾ ಪುಸ್ತಕ ಬಿಡುಗಡೆ, ಗೋಷ್ಠಿಗಳು, ಶೋಭಾಯಾತ್ರೆ, ವಿಪ್ರ ನಗೆ ನಡೆಯಲಿವೆ ಎಂದರು. ಡಿ.29ರಂದು ಗೋಷ್ಠಿಗಳು ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಗೋವಿಂದರಾವ್ ಕುಲಕರ್ಣಿ,ಪಂಡಿತ್ ರಾಮಕೃಷ್ಣ ಆಚಾರ್ ಗೋನವಾರ, ನರಸಿಂಹ ಆಚಾರ್ ಮಠಾಧಿಕಾರಿ, ಪ್ರಮುಖರಾದ ಹನುಮೇಶ್ ಆಚಾರ ಬಾದರ್ಲಿ, ವೆಂಕಟ್‌ರಾವ್ ಬಂಡಿ, ಪ್ರಹ್ಲಾದ ಗುಡಿ, ಜಗನ್ನಾಥ್ ಕರಡೋಣಿ, ಭೀಮಸೇನ್ ಆಚಾರ್. ಪ್ರಹ್ಲಾದ ಕುಲಕರ್ಣಿ, ಪ್ರಸನ್ನ ಅಲಬನೂರ್, ಚನ್ನಳ್ಳಿ ರಾಘವೇಂದ್ರರಾವ್, ಹನುಮಂತಚಾರಮಸ್ಕಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net