

ಅಥಣಿ: ಉತ್ತಮ ನಾಗರಿಕರಾದರೆ ಅದೇ ನಾವು ಶಿಕ್ಷಕರಿಗೆ ನೀಡುವ ನಿಜವಾದ ಗೌರವ ಎಂದು ಸ್ಥಳೀಯ
ಎಸ್.ಎಂ.ಎಸ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಸ್.ಕಾಂಬಳೆ ಹೇಳಿದರು.
ಪಟ್ಟಣದ ಕೆಎಲ್‌ಇ ಸಂಸ್ಥೆಯ ಸ್ಥಳೀಯ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕ ದಿನಾಚರಣೆಯಲ್ಲಿ ಮಾತನಾಡಿ, ಯಶಸ್ಸಿಗೆ ಕಠಿಣ ಪರಿಶ್ರಮ ಅಗತ್ಯ ಎಂದರು.
ವಿದ್ಯಾರ್ಥಿನಿ ಜ್ಯೋತಿ ಸಾಲಿಮಠ ಮಾತನಾಡಿದರು. ಪ್ರೊ.ಮಂಜುನಾಥ ಹೊಳ್ಳಿಯವರ, ಭೌತಶಾಸ್ತ್ರ ವಿಭಾಗದ ಸೌಮ್ಯಾ ದೇಶಿಂಗೆ ಮತ್ತು ವಿದ್ಯಾರ್ಥಿಗಳಾದ ಮಹಾದೇವಿ ಜಕ್ಕಪ್ಪನವರ, ಶಿವಕುಮಾರ ಮಾಳಿ, ಸಾಗರ ಮಗರಾಳೆ, ಸೃಷ್ಟಿ ಹೊಕ್ಕುಂಡಿ, ಉಷಾ ಕಿರಣ ಮಾತನಾಡಿದರು.
ನಾಲ್ಕು ಪುಸ್ತಕ ರಚನೆ ಮತ್ತು ಸಂಶೋಧನಾ ಲೇಖನ ಪ್ರಕಟಣೆಗಾಗಿ ಆಂಗ್ಲಭಾಷಾ ವಿಭಾಗದ ಪ್ರೊ.ಕೃಷ್ಣಾ ಪಾಟೀಲ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಗಳಲ್ಲಿ ಸಂಶೋಧನಾ ಲೇಖನ ಪ್ರಕಟಿಸಿದ ರಸಾಯನಶಾಸ್ತ್ರ ವಿಭಾಗದ ಡಾ.ಜಯಣ್ಣ ಎನ್.ಡಿ.ಅವರನ್ನು ಸತ್ಕರಿಸಲಾಯಿತು.
ಪ್ರೊ.ಸಂಗಮೇಶ ತಳವಾರ, ಪ್ರೊ.ಕೆ.ನಾಗಿರೆಡ್ಡಿ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು. ಭಾಗ್ಯಶ್ರೀ ಲೋಕೂರ ಸ್ವಾಗತಿಸಿದರು. ಅಶ್ವಿನಿ ಹಂಚಿನಾಳ ವಂದಿಸಿದರು. ರೇವಣಸಿದ್ಧ ಮಾಳಿ ನಿರೂಪಿಸಿದರು.