ಯಶಸ್ಸನ್ನು ಪಡೆಯಲು ಶ್ರದ್ಧೆಯ ಅಧ್ಯಯನ ಅಗತ್ಯ

CTD 15 SRS-02
Published on

ಚಿತ್ರದುರ್ಗ: ಭರದಿಂದ ಬೆಳೆಯತ್ತಿರುವ ತಂತ್ರಜ್ಞಾನ ಯುಗದ ಈ ಜಗತ್ತಿನಲ್ಲಿ ನೀವೆಲ್ಲರೂ ಓಡುವ ಕುದುರೆಗಳಾಗ ಬೇಕೆಂದು ರಾಣಿ ಚೆನ್ನಮ್ಮ ವಿ ವಿ ವಾಣಿಜ್ಯಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಡೀನ್ ಡಾ.ಸಿ.ಎಂ.ತ್ಯಾಗರಾಜ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಎಸ್ ಆರ್‌ಎಸ್ ಪಿಯು ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಸಾಧಕರೊಂದಿಗೆ ಸಂವಾದ ‘ಸ್ಫೂರ್ತಿಯಿಂದ ಸ್ಫೂರ್ತಿಯೆಡೆಗೆ’ ಕಾರ‌್ಯಕ್ರಮ ಉದ್ಘಾ ಟಿಸಿ ಮಾತಾನಾಡಿದ ಅವರು,ಎಲ್ಲ ಕ್ಷೇತ್ರಗಳಲ್ಲಿಂದು ಸ್ಪರ್ಧೆ ಇದೆ. ಅವುಗಳನ್ನು ಎದುರಿಸಿ ಯಶಸ್ಸನ್ನು ಪಡೆಯಲು,ಸೂಕ್ತ ಮಾರ್ಗದರ್ಶ ನ,ಶ್ರದ್ಧೆಯ ಅಧ್ಯಯನದ ಅಗತ್ಯವಿದೆ. ಎಸ್‌ಆರ್‌ಎಸ್ ಸಂಸ್ಥೆ ವಿದ್ಯಾರ್ಥಿಗಳನ್ನು ರಾಷ್ಟ್ರ ಮತ್ತು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಹೊಳೆಯು ವ ನಕ್ಷತ್ರಗಳನ್ನಾಗಿ ರೂಪಿಸುತ್ತಿದೆ ಎಂದರು.

ಬೋಶ್ ಕಂಪನಿ ಸೀನಿಯರ್ ಇಂಜಿನಿಯರ್,ಕಾಲೇಜಿನ ಮೊದಲ ಬ್ಯಾಚ್ ವಿದ್ಯಾರ್ಥಿಯಾಗಿದ್ದ ಪವನ್‌ಗೀಬರ್ ಮಾತನಾಡಿ,ಗು ಣಾತ್ಮಕ ಶಿಕ್ಷಣದಲ್ಲಿ ಎಸ್‌ಆರ್‌ಎಸ್ ಸೇವೆ ಅವಿಸ್ಮರಣೀಯ. ನಮ್ಮನ್ನು ಬೆಳೆಸಿದ ಸಂಸ್ಥೆ ಇದು. ಇದಕ್ಕಾಗಿ ಸಂಸ್ಥೆ ಅಧ್ಯಕ್ಷ ಲಿಂಗಾರೆಡ್ಡಿ ಅವರಿಗೆ ಋಣಿಯಾಗಿದ್ದೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಅವರು ಮಾತನಾಡಿ,ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿಲಿ ಎಂಬ ಉದ್ದೇಶದಿಂದ ಪ್ರತಿ ವರ್ಷ ಈ ಕಾರ‌್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ ಎಂದರು. ವಿದ್ಯಾರ್ಥಿ ದಿಸೆಯಲ್ಲಿ ಪದವಿಪೂರ್ವ ಶಿಕ್ಷಣವೆಂಬುದು ತುಂಬಾ ಮ ಹತ್ವದ ಘಟ್ಟ. ಆದ್ದರಿಂದ ಎಚ್ಚರಿಕೆ,ಶ್ರದ್ಧೆ ಹಾಗೂ ನಿರಂತರ ಅಧ್ಯಯನ ಮುಖ್ಯವೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಸ್ಪರ್ಧಾತ್ಮಕ ಜಗತ್ತನ್ನು ಅರಿತಿರುವ ನಾನು ಮುಂದಿನ ದಿನಗಳಲ್ಲಿ ಇಂಟಿಗ್ರೇಟೆಡ್ ಪಿಯು ಕಾಲೇಜು ಸ್ಥಾಪಿಸುವ ಇರಾದೆ ಇದೆ ಎಂದರು.

ಪ್ರಾಂಶುಪಾ ಲ ಇ.ಗಂಗಾಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. 2023ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಎನ್.ಮರುಳಸಿದ್ದನಗೌಡ,ಚಿನ್ಮಯ್ ಎಂ ಗೌಡ,ಕೆ.ಎಂ. ಮಧುಸೂದನ್,ಟಿ.ಆಯುಶ್,ಡಿ.ಯಶಸ್,ಜೆಇಇ ಅಡ್ವಾನ್ಸ್‌ಲ್ಲಿ 1140ನೇ ರ‌್ಯಾಂಕ್ ಪಡೆದ ಎಚ್.ಎಸ್.ಜಯಂತ್ ಹಾಗೂ ಸೆಕೆಂಡ್ ಪಿ ಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಾಣಿಜ್ಯವಿಭಾಗದ ವಿದ್ಯಾರ್ಥಿನಿ ಕೆ.ಸಿ.ಪೃಥ್ವಿ ಹಾಗೂ ನೀಟ್,ಜೆಇಇ,ಸಿಇಟಿ,ಸಿಎ ಸಹಿತ ಉತ್ತಮ ಸಾಧನೆ ತೋರಿದ ಕಾಲೇಜಿನ 68 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಂಸ್ಥೆ ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ,ಚಳ್ಳಕೆರೆ ಕಾ ಲೇಜಿನ ಆಡಳಿತಾಧಿಕಾರಿ ಡಾ.ಕೃಷ್ಣಪ್ರಸಾದ್,ಉಪನ್ಯಾಸಕರು,ಬೊಧಕೇತರ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net