ಯಶಸ್ವಿಯಾಗಿ ನಡೆದ ಜಾನಪದ ಕಲಾ ಮೇಳ

ಯಶಸ್ವಿಯಾಗಿ ನಡೆದ ಜಾನಪದ ಕಲಾ ಮೇಳ
Published on

ಹಾಸನ: ನಗರದ ಹೊರಭಾಗದಲ್ಲಿರುವ ತೇಜೂರು ಗ್ರಾಮದಲ್ಲಿ ಕಲ್ಪಿತ ಜನಜಾಗೃತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾಂತಮ್ಮ ಮಹಿಳಾ ಕಾಲೇಜು, ಏಕಲವ್ಯ ಜಾನಪದ ಸಂಸ್ಕೃತಿಕ ಸಂಸ್ಥೆ ಬೊಮ್ಮನಹಳ್ಳಿ ಸಹಯೋಗದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಜಾನಪದ ಕಲಾ ಮೇಳ ಅದ್ದೂರಿಯಾಗಿ ಜರುಗಿತು.
ಸಾಂಸ್ಕೃತಿಕ ಕಾರ್ಯಕ್ರಮಗಳಾದ ಮಹಿಳಾ ವೀರಗಾಸೆ-ಸಂಗೀತ ಮತ್ತು ನಂದಿಧ್ವಜ ಕುಣಿತ-ಯದೀಶ ಮತ್ತು ತಂಡ ಕಡೂರು, ಸುಗಮ ಸಂಗೀತ ಲೋಕೇಶ್ ಎಂ.ಎನ್ ಮತ್ತು ತಂಡ ಹೊಳೆನರಸೀಪುರ, ಜಾನಪದ ಗೀತೆ- ದೇವರಾಜು ಮತ್ತು ತಂಡ, ತತ್ವಪದಗಳು ಜನಕನಾಯಕ ಮತ್ತು ತಂಡದಿಂದ ಯಶಸ್ವಿಯಾಗಿ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎವಿಕೆ ಕಾಲೇಜಿನ ಪ್ರಾಂಶುಪಾಲ ಡಾ.ಯತೀಶ್ವರ್ ವಹಿಸಿದ್ದರು. ಕಲಾ ತಂಡಗಳ ಮೆರವಣಿಗೆ ಉದ್ಘಾಟನೆಯನ್ನು ಮಲೆನಾಡು ಆಸ್ಪತ್ರೆಯ ಪ್ರಸೂತಿ ಸ್ತ್ರೀ ರೋಗ ತಜ್ಞರಾದ ಡಾ.ಸಾವಿತ್ರಿ ಚಾಲನೆ ನೀಡಿದರು.
ದಸಂಸ ಜಿಲ್ಲಾ ಅಧ್ಯಕ್ಷ ಚೇತನ್ ಕುಮಾರ್, ಭೂವನಹಳ್ಳಿ ಹೇಮಂತ್ ಕುಮಾರ್, ತೇಜೂರು ಗ್ರಾಮದ ಇಟ್ಟಿಗೆ ಮಂಜಣ್ಣ, ಕುಮಾರ್ ಕಟ್ಟಿಬೆಳಗುಲಿ ಮತ್ತು ಎನ್‌ಎಸ್‌ಎಸ್ ಶಿಬಿರಾಧಿಕಾರಿಗಳು, ಗ್ರಾಮಸ್ಥರು, ಶಿಬಿರರಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net